ರಜತ್ ಪಾಟಿದಾರ್ ಹೆಸರಿಗಷ್ಟೇ ಕ್ಯಾಪ್ಟನ್, ಕಂಟ್ರೋಲ್ ಬಟನ್ ವಿರಾಟ್ ಕೊಹ್ಲಿ
ಆರ್ ಸಿಬಿಯಲ್ಲಿ ಯಾರೇ ನಾಯಕರಾದರೂ ಕೊಹ್ಲಿ ಮಾತಿಗೇ ಹೆಚ್ಚು ಬೆಲೆಯಿರುತ್ತದೆ. ಈ ಬಾರಿ ವಿರಾಟ್ ಕೊಹ್ಲಿ ನಾಯಕರಾಗಿ ಮತ್ತೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆಯನ್ನು ಆರ್ ಸಿಬಿ ಹುಸಿಗೊಳಿಸಿದೆ.
ಯುವ ಆಟಗಾರ ರಜತ್ ಪಾಟಿದಾರ್ ಗೆ ನಾಯಕತ್ವ ನೀಡಿದ್ದು ಎಲ್ಲರಿಗೂ ಅಚ್ಚರಿಯಾಗಿದೆ. ಆದರೆ ರಜತ್ ರನ್ನು ನಾಯಕರಾಗಿ ಆರ್ ಸಿಬಿ ಘೋಷಣೆ ಮಾಡುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಗಳ ಸುರಿಮಳೆಯಾಗುತ್ತಿದೆ.
ರಜತ್ ಹೇಳಿಕೊಳ್ಳಲಿಕ್ಕಷ್ಟೇ ಕ್ಯಾಪ್ಟನ್, ಆದರೆ ತಂಡದ ನಿರ್ಧಾರವನ್ನೆಲ್ಲಾ ಕೊಹ್ಲಿಯೇ ತೆಗೆದುಕೊಳ್ಳಲಿದ್ದಾರೆ. ಹೀಗಿದ್ದ ಮೇಲೆ ಕೊಹ್ಲಿಯನ್ನೇ ನಾಯಕನಾಗಿ ಆಯ್ಕೆ ಮಾಡಬಹುದಿತ್ತಲ್ವಾ? ಯಾಕೆ ನಾಮಕಾವಸ್ಥೆಗೆ ಇನ್ನೊಬ್ಬರ ಹೆಸರು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.