ರಣಜಿ ಸೆಮಿಫೈನಲ್ ನಲ್ಲಿ ಕರ್ನಾಟಕಕ್ಕೆ ಕೆಎಲ್ ರಾಹುಲ್ ಬಲ

ಮಂಗಳವಾರ, 25 ಫೆಬ್ರವರಿ 2020 (09:31 IST)
ಬೆಂಗಳೂರು: ಜಮ್ಮು ಕಾಶ್ಮೀರ ತಂಡವನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 167 ರನ್ ಗಳಿಂದ ಭರ್ಜರಿಯಾಗಿ ಸೋಲಿಸಿ ರಣಜಿ ಟ್ರೋಫಿ ಸೆಮಿಫೈನಲ್ ಗೇರಿರುವ ಕರ್ನಾಟಕಕ್ಕೆ ಕೆಎಲ್ ರಾಹುಲ್ ಬಲ ಸಿಕ್ಕಿದೆ.


ಸೆಮಿಫೈನಲ್ ನಲ್ಲಿ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಬಂಗಾಳ ವಿರುದ್ಧ ಸೆಣಸಲಿರುವ ರಾಜ್ಯ ತಂಡಕ್ಕೆ ಕೆಎಲ್ ರಾಹುಲ್ ಸೇರ್ಪಡೆಯಾಗಿದ್ದಾರೆ. ಫೆಬ್ರವರಿ 29 ರಿಂದ ನಡೆಯಲಿರುವ ಪಂದ್ಯಕ್ಕೆ ರಾಜ್ಯ ತಂಡ ಪ್ರಕಟಿಸಲಾಗಿದ್ದು, ರಾಹುಲ್ ಸೇರ್ಪಡೆಯಾಗಿದ್ದು ಬಿಟ್ಟರೆ ಉಳಿದಂತೆ ಕ್ವಾರ್ಟರ್ ಫೈನಲ್ ನಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.

ಅದ್ಭುತ ಫಾರ್ಮ್ ನಲ್ಲಿರುವ ರಾಹುಲ್ ಕ್ವಾರ್ಟರ್ ಫೈನಲ್ ಪಂದ್ಯಕ್ಕೇ ತಂಡ ಕೂಡಿಕೊಳ್ಳಲಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದರು. ಆದರೆ ರಾಷ್ಟ್ರೀಯ ತಂಡದಲ್ಲಿ ಸತತ ಕ್ರಿಕೆಟ್ ನಿಂದ ಬಳಲಿದ್ದ ರಾಹುಲ್ ಕೆಲವು ದಿನ ವಿಶ್ರಾಂತಿ ಪಡೆದಿದ್ದರು. ಇದೀಗ ರಾಜ್ಯ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ