ರಣಜಿ ಟ್ರೋಫಿ ಫೈನಲ್: ಮೊದಲು ಟ್ರೋಫಿ ಎತ್ತಿಕೊಳ್ಳಲು ಟೀಂ ಇಂಡಿಯಾ ಈ ಇಬ್ಬರು ಆಟಗಾರರ ನಡುವೆ ಫೈಟ್!
ವಿಶೇಷವೆಂದರೆ ಇಬ್ಬರೂ ಇದುವರೆಗೆ ಹಲವು ರಣಜಿ ಪಂದ್ಯಗಳಾಡಿದ್ದರೂ ಫೈನಲ್ ನಲ್ಲಿ ಗೆದ್ದು ರಣಜಿ ಟ್ರೋಫಿ ಎತ್ತಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಇಬ್ಬರೂ ಆಟಗಾರರು ರಣಜಿ ಟ್ರೋಫಿ ಎತ್ತಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಸೌರಾಷ್ಟ್ರವೇ ಬಲಿಷ್ಠವೆನಿಸಿದರೂ ವಿದರ್ಭ ಕೂಡಾ ಅಚ್ಚರಿ ನೀಡಲು ಸಮರ್ಥವಾಗಿದೆ. ಹಾಲಿ ಚಾಂಪಿಯನ್ ಆಗಿರುವ ವಿದರ್ಭ ಮತ್ತೆ ಚಾಂಪಿಯನ್ ಆದರೆ ಪ್ರಥಮ ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್ ತಂಡದ ಭಾಗವಾಗುವ ಅವಕಾಶ ಉಮೇಶ್ ಯಾದವ್ ಪಾಲಾಗಲಿದೆ. ಇನ್ನು, ಸೌರಾಷ್ಟ್ರ ಗೆದ್ದರೆ ಆ ಸಾಧನೆ ಪೂಜಾರ ಪಾಲಾಗಲಿದೆ. ಯಾರ ಕೈ ಮೇಲಾಗುತ್ತದೆ ಕಾದು ನೋಡಬೇಕಿದೆ.