ಟೀಂ ಇಂಡಿಯಾ ಪರ ಆಡುವಾಗಲೂ ಮಂಕಡ್ ಔಟ್ ಮಾಡಿದ್ದ ಆರ್ ಅಶ್ವಿನ್, ಆದರೆ ಆಗಿದ್ದೇ ಬೇರೆ!

ಗುರುವಾರ, 28 ಮಾರ್ಚ್ 2019 (09:22 IST)
ಮುಂಬೈ: ಐಪಿಎಲ್ ನಲ್ಲಿ ವಿವಾದ ಸೃಷ್ಟಿಸಿರುವ ಮಂಕೆಡ್ ಔಟ್ ಗೆ ಕಾರಣರಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಇದಕ್ಕೂ ಮೊದಲು ಒಮ್ಮೆ ಟೀಂ ಇಂಡಿಯಾ ಪರ ಆಡುವಾಗ ಇದೇ ರೀತಿ ಮಾಡಿದ್ದರು.


2012 ರಲ್ಲಿ ಆಸ್ಟ್ರೇಲಿಯಾದಲ್ಲಿ ತ್ರಿಕೋನ ಏಕದಿನ ಸರಣಿ ವೇಳೆ ಶ್ರೀಲಂಕಾ ವಿರುದ್ಧ ಆಡುವಾಗ ಅಶ್ವಿನ್ ಬೌಲಿಂಗ್ ಮಾಡಲು ಹೊರಟವರು ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಕ್ರೀಸ್ ಬಿಟ್ಟಿದ್ದ ಲಹಿರು ತಿರಿಮನ್ನೆ ಅವರನ್ನು ಮಂಕೆಡ್ ಔಟ್ ಮಾಡಿದ್ದರು.

ಇದು ಕ್ರೀಡಾ ನಿಯಮದ ಪ್ರಕಾರ ಔಟ್ ಆಗಿದ್ದರೂ ನೈತಿಕವಾಗಿ ಚರ್ಚೆಗೆ ಕಾರಣವಾಗಬಹುದು ಎಂಬ ನಿಟ್ಟಿನಲ್ಲಿ ಅಂಪಾಯರ್ ಗಳು ಅಂದು ಭಾರತೀಯ ನಾಯಕನಾಗಿದ್ದ ವೀರೇಂದ್ರ ಸೆಹ್ವಾಗ್ ಮತ್ತು ಹಿರಿಯ ಆಟಗಾರ ಸಚಿನ್ ತೆಂಡುಲ್ಕರ್ ಬಳಿಕ ಔಟ್ ನೀಡಬೇಕೇ ಬೇಡವೇ ಎಂದು ಅಭಿಪ್ರಾಯ ಕೇಳಿದ್ದರು. ಈ ಸಂದರ್ಭದಲ್ಲಿ ಸೆಹ್ವಾಗ್ ಮತ್ತು ಸಚಿನ್ ಇದು ವಿವಾದಕ್ಕೆ ಕಾರಣವಾಗಬಹುದೆಂಬ ಉದ್ದೇಶದಿಂದ ಔಟ್ ನೀಡುವುದು ಬೇಡವೆಂದು ಅಂಪಾಯರ್ ಗೆ ಸಲಹೆ ನೀಡಿದ್ದರು. ಹೀಗಾಗಿ ಅಂದು ಬ್ಯಾಟ್ಸ್ ಮನ್ ಬ್ಯಾಟಿಂಗ್ ಮುಂದುವರಿಸಿದ್ದರು.

ಆದರೆ ಈಗ ಐಪಿಎಲ್  ನಲ್ಲಿ ಅಶ್ವಿನ್ ಅದೇ ರೀತಿ ಮಾಡಿ ಜೋಸ್ ಬಟ್ಲರ್ ಔಟ್ ಗೆ ಕಾರಣರಾಗಿದ್ದಲ್ಲದೆ, ಮಂಕೆಡ್ ಔಟ್ ಬಗ್ಗೆ ತೀವ್ರ ಚರ್ಚೆಯಾಗುವಂತೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ