RCB vs CSK IPL 2025: ಇಂದಿನ ಮ್ಯಾಚ್ ಟಿಕೆಟ್ ತಗೊಂಡವರಿಗೆ ಶಾಕ್ ಗ್ಯಾರಂಟಿ

Krishnaveni K

ಶನಿವಾರ, 3 ಮೇ 2025 (08:45 IST)
ಬೆಂಗಳೂರು: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಭಾರೀ ನಿರೀಕ್ಷಿತ ಪಂದ್ಯವಿದೆ. ಆದರೆ ಈ ಪಂದ್ಯ ವೀಕ್ಷಿಸಲು ದುಬಾರಿ ಟಿಕೆಟ್ ಪಡೆದುಕೊಂಡವರಿಗೆ ಶಾಕ್ ಕಾದಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇಂದು ಆರ್ ಸಿಬಿ ಮತ್ತು ಸಿಎಸ್ ಕೆ ನಡುವೆ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯವೆಂದರೆ ಕೇಳಬೇಕೇ? ಅಭಿಮಾನಿಗಳು ಎಷ್ಟೇ ಮೊತ್ತವಾದರೂ ಟಿಕೆಟ್ ಕೊಂಡು ಮ್ಯಾಚ್ ನೋಡಲು ಕಾಯುತ್ತಿರುತ್ತಾರೆ.

ಆದರೆ ಇಂದಿನ ಹವಾಮಾನ ವರದಿ ನೋಡಿದರೆ ಪಂದ್ಯ ನಡೆಯುವುದೇ ಎಂಬ ಅನುಮಾನ ಮೂಡುತ್ತಿದೆ. ಕಳೆದ ಎರಡು ದಿನಗಳಿಂದ ಚಿನ್ನಸ್ವಾಮಿ ಮೈದಾನ ಸುತ್ತಮುತ್ತ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಇಂದೂ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಆರ್ ಸಿಬಿ ಕಳೆದ ಪಂದ್ಯಕ್ಕೂ ಮಳೆಯಾಗಿತ್ತು. ಆದರೆ ಚಿನ್ನಸ್ವಾಮಿ ಮೈದಾನದಲ್ಲಿ ಅತ್ಯಾಧುನಿಕ ವ್ಯವಸ್ಥೆಯಿದ್ದು ಕ್ಷಣಾರ್ಧದಲ್ಲಿ ಮೈದಾನ ಒಣಗಿಸಲಾಗುತ್ತದೆ. ಹೀಗಾಗಿ ಪಂದ್ಯ ನಡೆದಿತ್ತು. ಇಂದೂ ಕೂಡಾ ಮಳೆಯ ಸಾಧ್ಯತೆಯಿದ್ದು, ಪಂದ್ಯ ನಡೆದರೆ ಸಾಕು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಒಂದೆಡೆ ವಿರಾಟ್ ಕೊಹ್ಲಿ ಆಗಿದ್ದರೆ ಇನ್ನೊಂದೆಡೆ ಧೋನಿ ಬೆಂಗಳೂರಿನಲ್ಲಿ ಆಡುವ ಕೊನೆಯ ಪಂದ್ಯ ಇದಾಗಿರಬಹುದು. ಹೀಗಾಗಿ ಈ ಪಂದ್ಯಕ್ಕೆ ಅದರದ್ದೇ ಆದ ಮಹತ್ವವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ