Shubman Gill: ರನೌಟ್ ಕೊಟ್ಟಿದ್ದಕ್ಕೂ ಜಗಳ, ಎಲ್ ಬಿಡಬ್ಲ್ಯು ಕೊಡದೇ ಇದ್ದಿದ್ದಕ್ಕೂ ಕಿತ್ತಾಟ: ಶುಬ್ಮನ್ ಗಿಲ್ ಕಾಳಗದ ವಿಡಿಯೋ
ನಿನ್ನೆಯ ಪಂದ್ಯವನ್ನು ಗುಜರಾತ್ 38 ರನ್ ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಹೈದರಾಬಾದ್ ಟೂರ್ನಿಯಿಂದ ಹೊರಬಿತ್ತು. ಗುಜರಾತ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಶುಬ್ಮನ್ ಗಿಲ್ 38 ಎಸೆತಗಳಿಂದ 76 ರನ್ ಸಿಡಿಸಿ ರನೌಟ್ ಆದರು. ಆದರೆ ಅವರ ರನೌಟ್ ತೀರ್ಪು ಕೊಂಚ ವಿವಾದಾತ್ಮಕವಾಗಿತ್ತು.
ಚೆಂಡು ಸರಿಯಾಗಿ ಸ್ಟಂಪ್ಸ್ ಗೆ ತಾಗಿರಲಿಲ್ಲ ಎಂಬುದು ಗಿಲ್ ವಾದ. ಈ ಕಾರಣಕ್ಕೆ ಅವರು ಔಟಾಗಿ ಮರಳುವಾಗ ಬೌಂಡರಿ ಲೈನ್ ಬಳಿ ಅಂಪಾಯರ್ ಜೊತೆ ಕಿತ್ತಾಡಿದರು. ನನಗೆ ಹೇಗೆ ಔಟ್ ಕೊಟ್ಟಿರಿ ಎಂದು ಪ್ರಶ್ನಿಸಿದರು.
ಬಳಿಕ ಹೈದರಾಬಾದ್ ಇನಿಂಗ್ಸ್ ವೇಳೆಯೂ ಅವರು ಅಂಪಾಯರ್ ಜೊತೆ ಇನ್ನೊಮ್ಮೆ ವಾಗ್ವಾದ ನಡೆಸಿದರು. ಅಭಿಷೇಕ್ ಶರ್ಮ ವಿರುದ್ಧ ಎಲ್ ಬಿಡಬ್ಲ್ಯು ತೀರ್ಪು ನೀಡಿಲ್ಲವೆಂದು ಅಂಪಾಯರ್ ಜೊತೆ ಕಿತ್ತಾಡಿದ್ದಾರೆ.