RCB vs CSK: ಕೊನೆಯ ಓವರ್‌ನಲ್ಲಿ ಅದೇ ಬ್ಯಾಟಿಂಗ್ ಅಬ್ಬರ ಪ್ರದರ್ಶಿಸಿದ MS Dhoni, Video ಇಲ್ಲಿದೆ

Sampriya

ಶುಕ್ರವಾರ, 28 ಮಾರ್ಚ್ 2025 (23:41 IST)
Photo Courtesy X
ಚೆನ್ನೈ: ಇಂದು ನಡೆದ ಐಪಿಎಲ್ 18ನೇ ಆವೃತ್ತಿಯ ಪಂದ್ಯಾಟದಲ್ಲಿ ಆರ್‌ಸಿಬಿ ವಿರುದ್ಧ ಚೆನ್ನೈ ಸೋಲು ಅನುಭವಿಸಿದರೂ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಕೀಪಿಂಗ್ ಹಾಗೂ ಕೊನೆಯ ಓವರ್‌ನ ಬ್ಯಾಟಿಂಗ್‌ ಅಬ್ಬರ ಎಲ್ಲರ ಗಮನ ಸೆಳೆಯಿತು. ವಯಸ್ಸು 43 ದಾಟಿದರೂ ಧೋನಿ ತಮ್ಮ ಆಟದ  ವೈಖರಿಯಲ್ಲಿ ಮಾತ್ರ ಅದೇ ಅಬ್ಬರವನ್ನು ಮುಂದುವರೆಸಿದ್ದಾರೆ.

ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ಚೆನ್ನೈಗೆ ತಲೆನೋವಾಗಿದ್ದ ಫಿಲ್ ಸಾಲ್ಟ್‌ರನ್ನು ಧೋನಿ ಸ್ಟಂಪಿಂಗ್ ಮಾಡಿ, ಔಟ್ ಮಾಡಿದರು. ಇದು ಎಲ್ಲರ ಗಮನ ಸೆಳೆಯಿತು.  ಅದಲ್ಲದೆ ಕೊನೆಯ  ಓವರ್‌ನಲ್ಲಿ ಎರಡು ಸಿಕ್ಸ್‌, ಒಂದು ಬೌಂಡರಿ ಹೊಡೆಯುವ ಮೂಲಕ ಅದೇ ತಮ್ಮ ಆಟದ ವೈಖರಿಯನ್ನು ಧೋನಿ ತೋರಿಸಿದರೂ.  

ಆದರೆ ಇಂದು ಆರ್‌ಸಿಬಿ ವಿರುದ್ಧ ನಡೆದ ಪಂದ್ಯಾಟದಲ್ಲಿ ಚೆನ್ನೈ ಹೀನಾಯ ಸೋಲು ಅನುಭವಿಸುವ ಮೂಲಕ, ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತು.

ಈ ಹಿಂದೆ ಧೋನಿ ಅದೆಷ್ಟೋ ಸೋಲುವ ಪಂದ್ಯವನ್ನು ಕೊನೆಯ ಓವರ್‌ನಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಸಿಕ್ಸ್ ಹಾಗೂ ಬೌಂಡರಿ ಹೊಡೆಯುವ ಮೂಲಕ ತಮ್ಮ ತಂಡದ ಗೆಲುವಿಗೆ ಕಾರಣಕರ್ತರಾಗಿದ್ದಾರೆ.

ಇಂದು ಚೆನ್ನೈ ಸೋಲು ಅನುಭವಿಸಿದರೂ, ಮಹೇಂದ್ರ ಸಿಂಗ್ ಧೋನಿ ಮಾತ್ರ ತಮ್ಮ ಕೊನೆಯ ಓವರ್‌ನ ಅಬ್ಬರವನ್ನೂ ಮಾತ್ರ ಹಾಗೆಯೇ ತೋರಿಸಿಕೊಟ್ಟಿರುವುದು, ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

A never ending story ????

Last over ???? MS Dhoni superhits ????

Scorecard ▶ https://t.co/I7maHMwxDS #TATAIPL | #CSKvRCB | @ChennaiIPL pic.twitter.com/j5USqXvf7r

— IndianPremierLeague (@IPL) March 28, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ