IPL 2025 RCB vs GT: ಆರ್‌ಸಿಬಿಯಿಂದ ಔಟ್ ಆಗಿ ಆರ್‌ಸಿಬಿಗೇ ಆಪ್ ಇಟ್ಟ ಮೊಹಮ್ಮದ್ ಸಿರಾಜ್

Sampriya

ಬುಧವಾರ, 2 ಏಪ್ರಿಲ್ 2025 (21:38 IST)
Photo Courtesy X
ಬೆಂಗಳೂರು:  ಕಳೆದ ವರ್ಷ ಆರ್‌ಸಿಬಿ ಪರ ಆಟವಾಡಿದ್ದ ಮೊಹಮ್ಮದ್ ಸಿರಾಜ್ ಅಮೋಘ ಬೌಲಿಂಗ್‌ ಪ್ರದರ್ಶನಕ್ಕೆ  ಆರ್‌ಸಿಬಿ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಆಘಾತವನ್ನು ಅನುಭವಿಸಿತು.

ಟಾಸ್‌ ಗೆದ್ದ ಗುಜರಾತ್ ಟೈಟನ್ಸ್ ನಾಯಕ ಶುಭ್‌ಮನ್ ಗಿಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಆರ್‌ಸಿಬಿಯನ್ನು ಬೌಲಿಂಗ್‌ಗೆ ಆಹ್ವಾನಿಸಿತು.

ಉತ್ತಮ ನಿರೀಕ್ಷೆಯಲ್ಲಿ ಪಂದ್ಯಾಟ ಶುರು ಮಾಡಿದ ಫಿಲ್ ಸಾಲ್ಟ್‌(14ರನ್) ಹಾಗೂ ವಿರಾಟ್‌ ಕೊಹ್ಲಿ(7)ರನ್ ಗಳಿಸಿ ಅವರು  ಫೆವೆಲಿಯನ್‌ ಕಡೆ ಬೇಗನೆ ವಾ‍ಪಾಸ್ಸಾದರು. ಅದಲ್ಲದೆ ದೇವದತ್ತ್‌ ಪಡಿಕ್ಕಲ್ ಕೂಡಾ ಮೊಹಮ್ಮದ್ ಸಿರಾಜ್ ಅಮೋಘ ಬೌಲಿಂಗ್‌ಗೆ ಕೇವಲ ನಾಲ್ಕು ರನ್‌ ಗಳಿಸಿ ಔಟ್ ಆದರು. ಇನ್ನೂ ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ ಕೂಡಾ ಕೇವಲ 12 ರನ್‌ಗಳಿಸಿ ಔಟ್‌ ಆದರೂ.  ಲಿವಿಂಗ್‌ಸ್ಟನ್ ಅವರು ಅರ್ಧ ಶತಕ ಸಿಡಿಸಿ ಮತ್ತೇ ಆಟಕ್ಕೆ ಜೀವ ತುಂಬಿದರು. ಜಿತೇಶ್‌ ಶರ್ಮಾ(33), ಕೃಣಲ್ ಪಾಂಡ್ಯ(5) ಹಾಗೂ ಡೇವಿಡ್‌ (32) ಹಾಗೂ ಭುವಣೇಶ್ವರ್‌( 1) ರನ್‌ಗಳೊಂದಿಗೆ 20 ಓವರ್‌ನಲ್ಲಿ 8 ವಿಕೆಟ್ ಕಳೆದುಕೊಂಡು ಆರ್‌ಸಿಬಿ 169ರನ್ ಗಳಿಸಿತು.

ಈ ಮೂಲಕ ಗುಜರಾತ್‌ಗೆ 170 ರನ್‌ಗಳ ಗೆಲುವಿನ ಗುರಿಯನ್ನು ಆರ್‌ಸಿಬಿ ನೀಡಿದೆ.

ಇನ್ನೂ ಕಳೆದ ವರ್ಷದ ಆರ್‌ಸಿಬಿ ತಂಡದಲ್ಲಿದ್ದ ಮೊಹಮ್ಮದ್ ಸಿರಾಜ್ ಅವರು ಈ ಬಾರೀ ಗುಜರಾತ್‌ ಟೈಟನ್ಸ್‌ ಪಡೆಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ, ಆರ್‌ಸಿಬಿ ವಿಕೆಟ್‌ಗಳನ್ನು ಬೇಗನೇ ಕಬಳಿಸಿದರು. ಸಿರಾಜ್, ಪ್ರಸಿದ್ ಕೃಷ್ಣ ಹಾಗೂ ಸಾಯಿ ಕೃಷ್ಣ ಅದ್ಭುತ ಬೌಲಿಂಗ್‌ನಿಂದ ಆರ್‌ಸಿಬಿಯನ್ನು 169ರನ್‌ಗಳಿಗೆ ಕಟ್ಟಿಹಾಕಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ