ಆರ್ ಸಿಬಿಗೆ ಕಳೆದ ಎರಡೂ ಪಂದ್ಯಗಳಲ್ಲಿ ಸ್ವತಃ ನಾಯಕ ರಜತ್ ಪಾಟೀದಾರ್ ಉತ್ತಮ ಬ್ಯಾಟಿಂಗ್ ಮೂಲಕ ಆಧಾರವಾಗಿದ್ದಾರೆ. ಇನ್ನು, ಆರಂಭಿಕ ಫಿಲ್ ಸಾಲ್ಟ್ ಸ್ಪೋಟಕ ಆರಂಭ ನೀಡುತ್ತಿದ್ದು, ಅವರಿಗೆ ಕೊಹ್ಲಿ ಸಾಥ್ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕೊಹ್ಲಿ ಕೊಂಚ ನಿಧಾನಿಯಾಗಿದ್ದರೂ ತವರಿನ ಪ್ರೇಕ್ಷಕರ ಮುಂದೆ ಅವರ ಬ್ಯಾಟ್ ಸಿಡಿಯುವ ನಿರೀಕ್ಷೆಯಿದೆ.
ಇನ್ನು ಬೌಲಿಂಗ್ ನಲ್ಲೂ ಭುವನೇಶ್ವರ್ ಕುಮಾರ್, ಜೋಶ್ ಹೇಝಲ್ ವುಡ್, ಕೃನಾಲ್ ಪಾಂಡ್ಯರಂತಹ ಅತ್ಯುತ್ತಮ ಬೌಲಿಂಗ್ ಪಡೆಯೇ ಆರ್ ಸಿಬಿ ಬಳಿಯಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಸಾಮಾನ್ಯವಾಗಿ ರನ್ ಹೊಳೆ ಹರಿಯುತ್ತದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಬ್ಯಾಟಿಗರು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಅತ್ತ ಗುಜರಾತ್ ತಂಡದಲ್ಲಿ ನಾಯಕ ಶುಬ್ಮನ್ ಗಿಲ್ ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮಿಂಚುವ ನಿರೀಕ್ಷೆಯಿದೆ. ಇನ್ನು ಬೌಲಿಂಗ್ ನಲ್ಲಿ ಆರ್ ಸಿಬಿಯಲ್ಲೇ ಬೆಳೆದ ಪ್ರತಿಭೆ ಮೊಹಮ್ಮದ್ ಸಿರಾಜ್ ಈಗ ಗುಜರಾತ್ ತಂಡದಲ್ಲಿರುವುದು ಆ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.