RCB vs MI: ತವರಿನಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌, ಬೌಲಿಂಗ್ ಆಯ್ಕೆ

Sampriya

ಸೋಮವಾರ, 7 ಏಪ್ರಿಲ್ 2025 (19:01 IST)
Photo Courtesy X
ಬೆಂಗಳೂರು: ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ಇಂದಿನ ಐಪಿಎಲ್‌ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿದೆ.

ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಬೌಲಿಂಗ್ ಆಯ್ದುಕೊಂಡಿದೆ.

ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಇದೀಗ ತವರಿನಲ್ಲಿ ಗೆಲುವಿನ ಲೆಕ್ಕಚಾರದಲ್ಲಿದೆ. ಅದಲ್ಲದೆ ತಂಡಕ್ಕೆ ಬಲ ತುಂಬಲು ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಅವರು ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ.  ಇದುವರೆಗೆ ಆಡಿದ ನಾಲ್ಕು ಪಂದ್ಯಾಟದಲ್ಲಿ ಒಂದು ಗೆಲುವು ಪಡೆದುಕೊಂಡಿರುವ ಹಾರ್ದಿಕ್ ಪಾಂಡ್ಯ ಪಡೆ ಪಾಯಿಂಟ್ಸ್‌ ಟೇಬಲ್‌ನಲ್ಲಿ 8ನೇ ಸ್ಥಾನದಲ್ಲಿದೆ.


ಪ್ರಸ್ತುತ ಆಡಿದ ಮೂರು ಪಂದ್ಯಾಟಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ತವರಿನಲ್ಲಿ ಜಿಟಿ ವಿರುದ್ಧ ಸೋಲು ಅನುಭವಿಸಿತು. ಇದೀಗ ಪಾಯಿಂಟ್ಸ್‌ ಟೇಬಲ್‌ನಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧ ಯಾವುದೇ ಬದಲಾವಣೆ ಇಲ್ಲದೆ ಆರ್‌ಸಿಬಿ ಕಣಕ್ಕಿಳಿದಿದೆ.

ಇಂದಿನ ಪಂದ್ಯಾಟಕ್ಕೆ ಮುಂಬೈ ಇಂಡಿಯನ್ಸ್ ಪಡೆಯನ್ನು ಬೂಮ್ರಾ ಅವರು ಸೇರಿಕೊಳ್ಳುವ ಮೂಲಕ ಆರ್‌ಸಿಬಿಗೆ ಹೊಸ ಸವಾಲು ಎದುರಾಗಿದೆ.

ಇನ್ನೊಂದು ವಿಶೇಷತೆ ಏನೆಂದರೆ ಈ ಪಂದ್ಯಾಟದಲ್ಲಿ ಸಹೋದರರಿಬ್ಬರು ಮುಖಾಮುಖಿಯಾಗಲಿದ್ದಾರೆ.  ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಆರ್‌ಸಿಬಿಯಿಂದ ಕೃನಾಲ್ ಪಾಂಡ್ಯ ಅವರು ಇಂದು ಸೆಣೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ