ಬೆಂಗಳೂರು: ಐಪಿಎಲ್ 2025 ರಲ್ಲಿ ಆರ್‌ಸಿಬಿ ಮತ್ತು ಪಿಬಿಕೆಎಸ್ ತಂಡಗಳು ಎರಡು ದಿನಗಳ ಅಂತರದಲ್ಲಿ ಮತ್ತೇ ಇಂದು ಮುಖಾಮುಖಿಯಾಗುತ್ತಿದೆ. ಮುಲ್ಲನ್‌ಪುರದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯಾಟದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಹಿಂದಿನ ಪಂದ್ಯಾಟದಲ್ಲಿ ಆರ್‌ಸಿಬಿ, ಪಂಜಾಬ್ ವಿರುದ್ಧ ಹೀನಾಯ ಸೋಲು ಅನುಭವಿಸಿತು. ಅದಲ್ಲದೆ ಆರ್‌ಸಿಬಿ ಬ್ಯಾಟಿಂಗ್ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಈ ಎಲ್ಲ ಟೀಕೆಗಳಿಗೆ ಇಂದಿನ ಪಂದ್ಯಾಟದ ಮೂಲಕ ಉತ್ತರ ಕೊಡಲು ಆರ್‌ಸಿಬಿ ಸಜ್ಜಾಗಿದೆ.
ತವರು ಮೈದಾನದಲ್ಲೇ ಸೋಲನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಈಗಾಗಲೇ ಆರ್‌ಸಿಬಿಯು ಆಡಿರುವ 7ರಲ್ಲಿ 4 ಪಂದ್ಯ ಗೆದ್ದಿದ್ದು, ಇನ್ನೂ ಮೂರು ಪಂದ್ಯಗಳನ್ನು ತವರಿನಲ್ಲೇ ಸೋತಿದೆ ಸೋತಿದೆ.