IPL 2025 RCB: ಮೊದಲು ಕಪ್ ಗೆಲ್ತಾ ಇರಲಿಲ್ಲ, ಈಗ ಚಿನ್ನಸ್ವಾಮಿಯಲ್ಲೇ ಗೆಲ್ತಾ ಇಲ್ಲ

Krishnaveni K

ಶನಿವಾರ, 19 ಏಪ್ರಿಲ್ 2025 (10:37 IST)
ಬೆಂಗಳೂರು: ಮೊದಲು ಆರ್ ಸಿಬಿ ಅಭಿಮಾನಿಗಳಿಗೆ ಕಪ್ ಗೆಲ್ಲಲ್ಲ ಎನ್ನುವ ಬೇಸರವಿತ್ತು. ಈಗ ಚಿನ್ನಸ್ವಾಮಿ ಮೈದಾನದಲ್ಲೇ ಗೆಲ್ಲುತ್ತಿಲ್ಲ ಎಂಬ ಹತಾಶೆ ಶುರುವಾಗಿದೆ.

ಕಳೆದ ಸೀಸನ್ ವರೆಗೂ ಆರ್ ಸಿಬಿ ಎಲ್ಲೇ ಹೋದ್ರೂ ಈ ಸಲ ಕಪ್ ನಮ್ದೇ ಎಂಬ ಸ್ಲೋಗನ್ ಹಿಂಬಾಲಿಸುತ್ತಿತ್ತು. ಆದರೆ ಈ ಬಾರಿ ಆ ಸ್ಲೋಗನ್ ಹೇಳಬೇಡಿ ಎಂದು ಸ್ವತಃ ವಿರಾಟ್ ಕೊಹ್ಲಿ ಮನವಿ ಮಾಡಿದ್ದರು. ಹೀಗಾಗಿ ಅಭಿಮಾನಿಗಳು ಈಗ ಹೇಳ್ತಾ ಇಲ್ಲ.

ಆದರೆ ದುರಾದೃಷ್ಟ ನೋಡಿ ಈ ಬಾರಿ ಮಹಿಳೆಯರ ಟೀಂ ಇರಲಿ, ಪುರುಷರ ಟೀಂ ಇರಲಿ ತವರಿನ ಚಿನ್ನಸ್ವಾಮಿ ಮೈದಾನದಲ್ಲಿ ಒಂದೇ ಒಂದು ಮ್ಯಾಚ್ ಹೋಗಲಿ ಟಾಸ್ ಕೂಡಾ ಗೆಲ್ಲುತ್ತಿಲ್ಲ. ಇದಕ್ಕೆ ದುರಾದೃಷ್ಟವೇ ಕಾರಣ, ತಂಡಕ್ಕೆ ದೃಷ್ಟಿಯಾಗಿದೆ ಎಂದೆಲ್ಲಾ ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ.

ಆದರೆ ಪ್ರತೀ ಬಾರಿಯೂ ಈವತ್ತು ನಾವು ಗೆಲ್ತೀವಿ ಎಂದು ಪಂದ್ಯ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಮೈದಾನಕ್ಕೆ ಬರುವ ಅಭಿಮಾನಿಗಳಿಗೆ ಮಾತ್ರ ನಿರಾಸೆಯಾಗುತ್ತಲೇ ಇದೆ. ಈ ಐಪಿಎಲ್ ಕೂಟದಲ್ಲಿ ಪುರುಷರ ತಂಡ ಇದುವರೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ಗೆದ್ದಿಲ್ಲ. ಇದಕ್ಕೆ ಮೊದಲು ಡಬ್ಲ್ಯುಪಿಎಲ್ ನಲ್ಲೂ ಮಹಿಳೆಯರ ತಂಡ ಕೂಡಾ ಒಂದೇ ಒಂದು ಪಂದ್ಯ ಗೆದ್ದಿಲ್ಲ. ವಿಚಿತ್ರವೆಂದರೆ ಪುರುಷರು ಮತ್ತು ಮಹಿಳೆಯರ ತಂಡ ಎರಡೂ ಕೂಡಾ ಟಾಸ್ ಕೂಡಾ ಗೆದ್ದಿಲ್ಲ. ಇಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ತಂಡವೇ ಗೆಲ್ಲುತ್ತಿದೆ. ಹೀಗಾಗಿ ಟಾಸ್ ನಿಂದಲೇ ಆರ್ ಸಿಬಿ ಸೋಲು ಆರಂಭವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ