ಸಿಲಿಂಡರ್ ಮಾರುತ್ತಿದ್ದ ತಂದೆ! ಬಡತನದಲ್ಲಿ ಅರಳಿದ ಪ್ರತಿಭೆ ರಿಂಕು ಸಿಂಗ್
ಉತ್ತರ ಪ್ರದೇಶದವರಾದ ರಿಂಕು ಸಿಂಗ್ ಐಪಿಎಲ್ ನಲ್ಲಿ 2018 ರಲ್ಲಿ ಕೆಕೆಆರ್ ತಂಡ ಸೇರಿದ್ದರು. ಇದಕ್ಕೆ ಮೊದಲು ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. 80 ಲಕ್ಷ ರೂ.ಗೆ ಕೆಕೆಆರ್ ಪಾಲಾಗಿದ್ದ ರಿಂಕು ಸಿಂಗ್ ಬಡತನದ ಹಿನ್ನಲೆಯಿಂದ ಬಂದವರು.
ಅವರ ತಂದೆ ಎಲ್ ಪಿಜಿ ಸಿಲಿಂಡರ್ ಮಾರಾಟ ಮಾಡಿ ಕುಟುಂಬ ಪೊರೆಯುತ್ತಿದ್ದರು. ಪಕ್ಕಾ ಬಡತನ ಸಾರುತ್ತಿದ್ದ ಮನೆ. ಮನೆ ತುಂಬಾ ಜನ. ಇಂತಿಪ್ಪ ರಿಂಕು ಸಿಂಗ್ ಇಂದು ಕ್ರಿಕೆಟ್ ಲೋಕದ ಹೊಸ ಸೆನ್ಸೇಷನ್ ಆಗಿದ್ದಾರೆ.