ಹೊಸ ಇನ್ನಿಂಗ್ಸ್‌ಗೆ ಸಜ್ಜಾದ ರಿಂಕು ಸಿಂಗ್: ಕ್ರಿಕೆಟಿಗನನ್ನು ವರಿಸುತ್ತಿರುವ ಹುಡುಗಿ ಹಿನ್ನೆಲೆ ಕೇಳಿದ್ರ ಶಾಕ್‌ ಆಗ್ತೀರಾ

Sampriya

ಭಾನುವಾರ, 1 ಜೂನ್ 2025 (14:36 IST)
Photo Courtesy X
ಮುಂಬೈ: ಭಾರತ ಕ್ರಿಕೆಟ್‌ ತಂಡದ ಆಟಗಾರ, ಸಿಕ್ಸರ್‌ಗಳ ಸರದಾರ ರಿಂಕು ಸಿಂಗ್‌ ಹೊಸ ಇನ್ನಿಂಗ್ಸ್‌ಗೆ ಸಜ್ಜಾಗಿದ್ದಾರೆ. ಅವರು ನವೆಂಬರ್‌ನಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.

ರಿಂಕು ಸಿಂಗ್‌ ಮದುವೆಯಾಗುವ ಯುವತಿ ಸಾಮಾನ್ಯದವಳಲ್ಲ. ಅವರು ಸಂಸದೆಯೊಬ್ಬರನ್ನು ವರಿಸಲಿದ್ದಾರೆ. ಮಚ್ಲಿಶಹರ್ ಸಂಸದೆ ಪ್ರಿಯಾ ಸರೋಜ್ ಅವರನ್ನು ರಿಂಕು ಸಿಂಗ್‌ ಮದುವೆಯಾಗಲಿದ್ದಾರೆ. ನವೆಂಬರ್ 18 ರಂದು ಈ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. 

ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರ ಉಂಗುರ ಬದಲಾವಣೆ ಸಮಾರಂಭ ಜೂನ್ 8 ರಂದು ಲಕ್ನೋದ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ನಡೆಯಲಿದೆ. ಅಲ್ಲದೆ, ನವೆಂಬರ್ 18 ರಂದು ವಾರಣಾಸಿಯ ತಾಜ್ ಹೋಟೆಲ್‌ನಲ್ಲಿ ವಿವಾಹ ನಡೆಸಲು ತೀರ್ಮಾನಿಸಲಾಗಿದೆ.

ನಿಶ್ಚಿತಾರ್ಥ, ವಿವಾಹ ಸಮಾರಂಭದಲ್ಲಿ ಅನೇಕ ದೊಡ್ಡ ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ. ಏಕೆಂದರೆ ಇತ್ತ ರಿಂಕು ಸಿಂಗ್ ಕ್ರಿಕೆಟಿಗನಾದರೆ, ಅತ್ತ ಪ್ರಿಯಾ ಅವರದ್ದು ರಾಜಕೀಯ ಕುಟುಂಬ. ಅವರ ತಂದೆ ಸಮಾಜವಾದಿ ಪಾರ್ಟಿ ಶಾಸಕರಾದರೆ, ಪ್ರಿಯಾ ಸರೋಜ್ ಸಂಸದೆ. ಹೀಗಾಗಿ ಮದುವೆ ಕಾರ್ಯಕ್ರಮಗಳಲ್ಲಿ ಕ್ರಿಕೆಟಿಗರೊಂದಿಗೆ ರಾಜಕಾರಣಿಗಳು ಸಹ ಕಾಣಿಸಿಕೊಳ್ಳಲಿದ್ದಾರೆ.

ಪ್ರಿಯಾ ಅವರು ಸಮಾಜವಾದಿ ಪಕ್ಷದ ಅತ್ಯಂತ ಕಿರಿಯ ಸಂಸದೆ. ಸರೋಜ ತಂದೆಯ ಹೆಸರು ತೂಫಾನಿ ಸರೋಜ್. ತೂಫಾನಿ ಅವರು ಮೂರು ಬಾರಿ ಸಂಸದರಾಗಿದ್ದಾರೆ. ತೂಫಾನಿ ಸರೋಜ್ ಪ್ರಸ್ತುತ ಕೆರಕಟ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಶಾಸಕರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ