ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್: ಆಸ್ಟ್ರೇಲಿಯಾ ತಂಡ ಹೀಗಿದೆ

ಗುರುವಾರ, 27 ಫೆಬ್ರವರಿ 2020 (09:43 IST)
ಮುಂಬೈ: ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿರುವ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ.


ಕ್ರಿಕೆಟ್ ನ ಮಾಜಿ ದಿಗ್ಗಜರು ಈ ಟೂರ್ನಮೆಂಟ್ ನಲ್ಲಿ ಆಡಲಿದ್ದು, ಭಾರತ ಸೇರಿದಂತೆ ಐದು ರಾಷ್ಟ್ರಗಳ ತಂಡ ಕೂಟದಲ್ಲಿ ಪಾಲ್ಗೊಳ್ಳಲಿದೆ. ಮಾರ್ಚ್ 7 ರಿಂದ 22 ರವರೆಗೆ ಮುಂಬೈನಲ್ಲಿ ಟೂರ್ನಮೆಂಟ್ ನಡೆಯಲಿದೆ. ಇದಕ್ಕಾಗಿ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದ್ದ ವೇಗಿ ಬ್ರೆಟ್ ಲೀ ಆಸೀಸ್ ತಂಡದ ನಾಯಕರಾಗಿದ್ದಾರೆ. ಉಳಿದಂತೆ ತಂಡ ಇಂತಿದೆ:

ಬ್ರೆಟ್ ಲೀ (ನಾಯಕ),  ಬ್ರಾಡ್ ಹಾಗ್, ಬ್ರೆಟ್ ಗೀವ್ಸ್, ಕ್ಲಿಂಟ್ ಮೆಕೆ, ಜಾರ್ಜ್ ಗ್ರೀನ್, ಜೇಸನ್ ಕ್ರೇಝಾ, ಮಾರ್ಕ್ ಕಾಸ್ ಗ್ರೋವ್,  ನಥನ್ ರೀರ್ ಡನ್, ರಾಬ್ ಕ್ವಿನೆ,  ಶೇನ್ ಲೀ, ಟ್ರಾವಿಸ್ ಬರ್ಟ್, ಕ್ಸೇವಿಯರ್ ಡೊಹರ್ಟಿ, ಬೆನ್ ಲಾಲಿನ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ