ಟಿ20 ವಿಶ್ವಕಪ್: ಭಾರತ ಮಹಿಳೆಯರಿಗೆ ಸತತ ಎರಡನೇ ಜಯ

ಮಂಗಳವಾರ, 25 ಫೆಬ್ರವರಿ 2020 (09:39 IST)
ಪರ್ಥ್: ಮಹಿಳಾ ಟಿ20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ 18 ರನ್ ಗಳ ಗೆಲುವು ಸಾಧಿಸಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಸತತ ಎರಡು ಗೆಲುವು ಸಾಧಿಸಿದೆ.


ಮೊದಲ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದ ಹರ್ಮನ್ ಪ್ರೀತ್ ಪಡೆ ನಿನ್ನೆ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಂಪಾದಿಸಿದೆ.

ಮೊದಲು ಬ್ಯಾಟಿಂಗ್ ಗಿಳಿದ ಭಾರತ ಶಫಾಲಿ ವರ್ಮ್ (39), ಜಮೀಮಾ ರೋಡ್ರಿಗಸ್ (34) ಭರ್ಜರಿ ಬ್ಯಾಟಿಂಗ್ ನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಮಾರಕ ದಾಳಿ ಸಂಘಟಿಸಿದ ಪೂನಂ ಯಾದವ್ 3 ವಿಕೆಟ್ ಕಬಳಿಸಿದರೆ ಶಿಖಾ ಪಾಂಡೆ ಮತ್ತು ಆರುಂಧತಿ ತಲಾ 2 ಮತ್ತು ರಾಜೇಶ್ವರಿ ಗಾಯಕ್ ವಾಡ್ 1 ವಿಕೆಟ್ ಕಿತ್ತರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ