ರೋಡ್ ಸೇಫ್ಟೀ ಟೂರ್ನಮೆಂಟ್ ನೇರಪ್ರಸಾರ ಯಾವೆಲ್ಲಾ ಚಾನೆಲ್ ನಲ್ಲಿದೆ ಇಲ್ಲಿದೆ ಲಿಸ್ಟ್

ಬುಧವಾರ, 26 ಫೆಬ್ರವರಿ 2020 (10:22 IST)
ಮುಂಬೈ: ದಿಗ್ಗಜ ಕ್ರಿಕೆಟಿಗರು ಪಾಲ್ಗೊಳ್ಳಲಿರುವ ರೋಡ್ ಸೇಫ್ಟೀ ಟೂರ್ನಮೆಂಟ್ ಕ್ರಿಕೆಟ್ ಪಂದ್ಯಾವಳಿಯ ನೇರಪ್ರಸಾರ ವಿವಿಧ ವಾಹಿನಿಗಳಲ್ಲಿ ಲಭ್ಯವಿದೆ. ಅದು ಯಾವೆಲ್ಲಾ ಎಂಬ ಲಿಸ್ಟ್ ಗೆ ಈ ಸುದ್ದಿ ಓದಿ.


ಮಾರ್ಚ್ 7 ರಿಂದ 22 ರವರೆಗೆ ಟೂರ್ನಮೆಂಟ್ ನಡೆಯಲಿದ್ದು, ರಿಲಯನ್ಸ್  ಸಂಸ್ಥೆ ಅಧಿಕೃತ ಪ್ರಾಯೋಜಕತ್ವ ಪಡೆದಿದೆ. ಭಾರತ ಸೇರಿದಂತೆ ಐದು ರಾಷ್ಟ್ರಗಳ ಮಾಜಿ ದಿಗ್ಗಜ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ತಂಡದ ನೇತೃತ್ವ ಸಚಿನ್ ತೆಂಡುಲ್ಕರ್ ಪಾಲಾಗಿದೆ. ಮೊದಲ ಪಂದ್ಯದಲ್ಲೇ ಬ್ರಿಯಾನ್ ಲಾರಾ ನೇತೃತ್ವದ ವಿಂಡೀಸ್ ತಂಡವನ್ನು ಭಾರತ ಎದುರಿಸಲಿದೆ.

ರಸ್ತೆ ಅಪಘಾತದ ಬಗ್ಗೆ ಮತ್ತು ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಈ ಟೂರ್ನಮೆಂಟ್ ನಡೆಸಲಾಗುತ್ತಿದೆ. ಈ ಟೂರ್ನಮೆಂಟ್ ನ ನೇರಪ್ರಸಾರವನ್ನು ಕಲರ್ಸ್ ಸಿನಿಪ್ಲೆಕ್ಸ್, ಕಲರ್ಸ್ ಕನ್ನಡ ಸಿನಿಮಾ, ವೂಟ್, ಜಿಯೋ ಟಿವಿ ಮತ್ತು ದೂರದರ್ಶನ ವಾಹಿನಿಯಲ್ಲೂ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ