ಟಿ20 ವಿಶ್ವಕಪ್ ಗೆ ಮುನ್ನ ರೋಹಿತ್ ಶರ್ಮಾರಿಂದ ಆತಂಕ

Krishnaveni K

ಶನಿವಾರ, 4 ಮೇ 2024 (12:17 IST)
Photo Courtesy: Twitter
ಮುಂಬೈ: ಟಿ20 ವಿಶ್ವಕಪ್ ಗೆ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾರಿಂದ ಆತಂಕಕಾರೀ ವಿಚಾರವೊಂದು ಹೊರಬಿದ್ದಿದೆ. ಇದೀಗ ರೋಹಿತ್ ಶರ್ಮಾ ಬೆನ್ನು ನೋವಿನ ಸಮಸ್ಯೆಗೊಳಗಾಗಿದ್ದಾರೆ.

ಕೆಕೆಆರ್ ವಿರುದ್ಧ ನಿನ್ನೆ ನಡೆದಿದ್ದ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡಿರಲಿಲ್ಲ. ಇದಕ್ಕೆ ಕಾರಣ ಅವರಿಗೆ ಬೆನ್ನು ನೋವು ಕಾಡುತ್ತಿರುವುದು ಎಂದು ತಿಳಿದುಬಂದಿದೆ. ನಿನ್ನೆಯ ಪಂದ್ಯದಲ್ಲಿ ಅವರಿಗೆ ಕೇವಲ ಬ್ಯಾಟಿಂಗ್ ಮಾತ್ರ ಮಾಡಿದ್ದರು.

ಪದೇ ಪದೇ ಬೆನ್ನು ನೋವು ಕಾಡುತ್ತಿರುವುದು ಆತಂಕಾರೀ ವಿಚಾರವಾಗಿದೆ. ಪಂದ್ಯದ ಬಳಿಕ ರೋಹಿತ್ ಆರೋಗ್ಯ ಸ್ಥಿತಿ ಬಗ್ಗೆ ಬೌಲರ್ ಪಿಯೂಷ್ ಚಾವ್ಲಾ ಮಾಹಿತಿ ನೀಡಿದ್ದರು. ಬೆನ್ನಿನಲ್ಲಿ ಕೊಂಚ ನೋವು ಕಂಡುಬರುತ್ತಿದೆ ಎಂದು ರೋಹಿತ್ ಹೇಳಿದ್ದರಿಂದ ಅವರು ಫೀಲ್ಡಿಂಗ್ ಮಾಡದೇ ಇರಲು ತೀರ್ಮಾನಿಸಿದರು. ಮುನ್ನೆಚ್ಚರಿಕೆಯ ಕ್ರಮವಾಗಿ ಫೀಲ್ಡಿಂಗ್ ಮಾಡಲಿಲ್ಲ ಎಂದಿದ್ದಾರೆ.

ಕಳೆದ ಬಾರಿ ಇಂಗ್ಲೆಂಡ್ ಟೆಸ್ಟ್ ಸರಣಿ ವೇಳೆಯೂ ರೋಹಿತ್ ಗೆ ಬೆನ್ನು ನೋವಿನ ಸಮಸ್ಯೆ ಕಂಡುಬಂದಿತ್ತು. ಬಳಿಕ ಅವರು ವಿಶ್ರಾಂತಿ ಪಡೆಯಬೇಕಾಗಿ ಬಂದಿತ್ತು. ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು ರೋಹಿತ್ ಗೆ ಬೆನ್ನು ನೋವು ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಮೂಡಿಸಿದೆ.

ಜೂನ್ 2 ರಿಂದ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ. ರೋಹಿತ್ ಶರ್ಮಾಗೆ ಉಪನಾಯಕರಾಗಿ ಹಾರ್ದಿಕ್ ಪಾಂಡ್ಯರನ್ನು ನೇಮಿಸಲಾಗಿದೆ. ಟಿ20  ವಿಶ್ವಕಪ್ ಟೂರ್ನಿ ಗೆಲ್ಲಬೇಕಾದರೆ ರೋಹಿತ್ ಶರ್ಮಾ ಫಿಟ್ ಆಗಿರಲೇಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ