IND vs ENG: ಟೀಂ ಇಂಡಿಯಾ ಗೆಲ್ಲದಂತೆ ಪಿಚ್ ಕ್ಯುರೇಟರ್ ಮಾಡಿದ್ದ ಕುತಂತ್ರವೇನು ಗೊತ್ತಾ

Krishnaveni K

ಮಂಗಳವಾರ, 5 ಆಗಸ್ಟ್ 2025 (10:17 IST)
Photo Credit: X
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ 6 ರನ್ ಗಳಿಂದ ಗೆದ್ದುಕೊಂಡಿತು. ಈ ಪಂದ್ಯ ಗೆಲ್ಲದಂತೆ ಪಿಚ್ ಕ್ಯುರೇಟರ್ ಮಾಡಿದ್ದ ಕುತಂತ್ರ ಈಗ ಬಯಲಾಗಿದೆ.

ದಿ ಓವಲ್ ಮೈದಾನದಲ್ಲಿ ಪಂದ್ಯದ ಎರಡು ದಿನ ಮೊದಲು ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮತ್ತು ಪಿಚ್ ಕ್ಯುರೇಟರ್ ಲೀ ಪೋರ್ಟಸ್ ನಡುವೆ ಕಿತ್ತಾಟವಾಗಿತ್ತು. ಪಿಚ್ ನಿಂದ 2.5 ಮೀಟರ್ ದೂರದಲ್ಲಿರಿ ಎಂದು ಕ್ಯುರೇಟರ್ ಹೇಳಿದ್ದರೆ ನೀವು ನಮಗೆ ಹೇಳಲು ಬರಬೇಡಿ ಎಂದು ತಿರುಗೇಟು ನೀಡಿದ್ದರು.

ಇದೀಗ ಐದನೇ ದಿನ ಇಂಗ್ಲೆಂಡ್ 35 ರನ್ ಮಾಡಿದರೆ ಸಾಕಿತ್ತು. 4 ವಿಕೆಟ್ ಬಾಕಿಯಿತ್ತು. ಹೀಗಾಗಿ ಪಿಚ್ ಕ್ಯುರೇಟರ್ ಪಿಚ್ ಮೇಲೆ ಹೆವಿ ರೋಲರ್ ಬಳಸಿದ್ದರು. ಇದರಿಂದ ಮೊದಲ ಅರ್ಧಗಂಟೆ ಬ್ಯಾಟಿಂಗ್ ಗೆ ಅನುಕೂಲವಾಗುತ್ತಿತ್ತು. ಇಂಗ್ಲೆಂಡ್ ಆ ಅರ್ಧಗಂಟೆಯಲ್ಲಿ 35 ರನ್ ಗಳಿಸಬಹುದು ಎಂಬುದು ಲೆಕ್ಕಾಚಾರವಾಗಿತ್ತೋ ಏನೋ.

ಆದರೆ ಅದೃಷ್ಟ ಭಾರತದ ಕಡೆಗಿತ್ತು. ಈ ತಂತ್ರಗಳೆಲ್ಲವೂ ಭಾರತದ ಮೇಲೆ ಪರಿಣಾಮ ಬೀರಲಿಲ್ಲ. ಭಾರತದ ಬೌಲರ್ ಗಳು ಅದರಲ್ಲೂ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ನಡೆಸಿದರು. 4 ವಿಕೆಟ್ ಪೈಕಿ 3 ವಿಕೆಟ್ ಗಳನ್ನೂ ತಾವೇ ಕಬಳಿಸಿದರು. ಈ ಮೂಲಕ ರೋಚಕ ಗೆಲುವು ಗಳಿಸಿಕೊಟ್ಟರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ