ಒಂಬತ್ತೂ ಪಂದ್ಯವನ್ನು ಗೆದ್ದಿದ್ದು ಹೇಗೆ? ರಹಸ್ಯ ಹೇಳಿದ ರೋಹಿತ್ ಶರ್ಮಾ
ಈ ಸಾಧನೆ ಮಾಡಲು ಸಾಧ‍್ಯವಾಗಿದ್ದು ಹೇಗೆ ಎಂದು ನಾಯಕ ರೋಹಿತ್ ಶರ್ಮಾ ನಿನ್ನೆ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡುವಾಗ ರಹಸ್ಯ ಬಯಲು ಮಾಡಿದ್ದಾರೆ.
ಇದು ಸುದೀರ್ಘವಾದ ಟೂರ್ನಿ. ಹಾಗಂತ ನಾವು ಒಟ್ಟಿಗೇ 3-4 ಪಂದ್ಯಗಳ ಬಗ್ಗೆ ಯೋಚನೆ ಮಾಡಲ್ಲ. ನಮ್ಮ ಮುಂದಿರುವ ಒಂದು ಪಂದ್ಯದ ಬಗ್ಗೆ ಮಾತ್ರ ಯೋಚಿಸಿ ಅದಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತಾ ಹೋಗಿದ್ದರಿಂದ ಈ ಯಶಸ್ಸು ಸಾಧ‍್ಯವಾಗಿದೆ ಎಂದಿದ್ದಾರೆ ರೋಹಿತ್. ಇದೀಗ ಸೆಮಿಫೈನಲ್ ನಲ್ಲಿ ಭಾರತ ನವಂಬರ್ 15 ರಂದು ನ್ಯೂಜಿಲೆಂಡ್ ವಿರುದ್ಧ ಪಂದ್ಯವಾಡಲಿದೆ.