ಅಂಪಾಯರ್ ಗೆ ರೋಹಿತ್ ಶರ್ಮಾ ಬೈಸೆಪ್ಸ್ ತೋರಿಸಿದ್ದೇಕೆ? ಕಾರಣ ವಿವರಿಸಿದ ಹಿಟ್ ಮ್ಯಾನ್

ಭಾನುವಾರ, 15 ಅಕ್ಟೋಬರ್ 2023 (10:00 IST)
Photo Courtesy: Twitter
ಅಹಮ್ಮದಾಬಾದ್: ಪಾಕಿಸ್ತಾನದ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿದ್ದರು.

ಹಿಟ್ ಮ್ಯಾನ್ ಎಂದಿನಂತೆ ದೊಡ್ಡ ಹೊಡೆತಗಳ ಮೂಲಕ ವೀಕ್ಷಕರನ್ನು ರಂಜಿಸಿದ್ದಾರೆ. ರೋಹಿತ್ ಸಿಕ್ಸ್ ಹೊಡೆದ ಶೈಲಿ ಸ್ವತಃ ಮೈದಾನದಲ್ಲಿದ್ದ ಅಂಪಾಯರ್ ಗೂ ಬೆರಗು ಮೂಡಿಸಿದೆ.

ಈ ನಡುವೆ ರೋಹಿತ್ ಅಂಪಾಯರ್ ಗೆ ತಮ್ಮ ಬೈಸೆಪ್ಸ್ ತೋರಿಸಿದ ದೃಶ್ಯವೊಂದು ವೈರಲ್ ಆಗಿತ್ತು. ಇದರ ಹಿಂದಿನ ಕಾರಣವೇನೆಂದು ಸ್ವತಃ ರೋಹಿತ್ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಜೊತೆ ಹಂಚಿಕೊಂಡಿದ್ದಾರೆ. ‘ಅಂಪಾಯರ್ ನನ್ನ ಬಳಿ ಹೇಗೆ ಅಷ್ಟು ದೊಡ್ಡ ಸಿಕ್ಸರ್ ಗಳನ್ನು ಹೊಡೆಯುತ್ತೀರಿ ಎಂದು ಕೇಳಿದರು. ಆಗ ನಾನು ಇದು ಬ್ಯಾಟ್ ನ ಪವರ್ ಅಲ್ಲ, ನನ್ನ ಬೈಸೆಪ್ಸ್ ಪವರ್ ಎಂದು ಬೈಸೆಪ್ಸ್ ತೋರಿಸಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ