ನ್ಯೂಜಿಲೆಂಡ್ ವಿರುದ್ಧ ಸೋತಿರುವುದಕ್ಕಲ್ಲ, ಸೋತ ರೀತಿಗೆ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿದೆ. ಸರಣಿಯುದ್ದಕ್ಕೂ ಹಿರಿಯ ಕ್ರಿಕೆಟಿಗರಿಂದ ಜವಾಬ್ಧಾರಿಯುತ ಆಟ ಬಂದಿಲ್ಲ. ಟಾಪ್ ಆರ್ಡರ್ ಬ್ಯಾಟಿಗರು ಸಾಕಷ್ಟು ಅನುಭವಿಗಳು. ಸ್ಪಿನ್ ಬೌಲಿಂಗ್ ಎದುರೇ ತಡಬಡಾಯಿಸಿದ ರೀತಿಗೆ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ.
ಆದರೆ ಅದು ಹಾಗಾಗಲೇ ಇಲ್ಲ. ಮೂರೂ ಪಂದ್ಯಗಳಲ್ಲೂ ಒಂದೇ ತಪ್ಪು ಮಾಡಿದರು. ಇಷ್ಟೆಲ್ಲಾ ಅನುಭವ ಹೊಂದಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಆಟಗಾರರಿಗೆ ಸ್ಪಿನ್ನರ್ ಗಳನ್ನು ಎದುರಿಸುವುದು ಮತ್ತು ತಾವು ಮಾಡುತ್ತಿರುವ ತಪ್ಪುಗಳೇನು ಎಂದು ಅರಿತುಕೊಂಡು ಸರಿಪಡಿಸುವುದು ಕಷ್ಟವಾಗಿತ್ತಾ ಎಂಬುದು ಅಭಿಮಾನಿಗಳ ಪ್ರಶ್ನೆ.
ಎಲ್ಲಕ್ಕಿಂತ ಹೆಚ್ಚಾಗಿ ತಂಡಕ್ಕೆ ಅಗತ್ಯವಿದ್ದಾಗಲೂ ರೋಹಿತ್, ವಿರಾಟ್ ರಿಂದ ಜವಾಬ್ಧಾರಿಯುತ ಆಟ ಬರಲಿಲ್ಲ. ಅಲ್ಲಿ ಗೆಲ್ಲಲೇಬೇಕು ಎಂಬ ಹಸಿವು ಕಾಣಿಸಲೇ ಇಲ್ಲ. ಇಷ್ಟೊಂದು ಸೋಂಬೇರಿಗಳಾಗಿದ್ದ ಮೇಲೆ ತಂಡದಲ್ಲಿ ಇನ್ನೂ ಯಾಕಿದ್ದೀರಿ? ನಿವೃತ್ತಿಯಾಗಿ ಯುವ ಆಟಗಾರರಿಗೆ ಅವಕಾಶ ಕೊಡಬಹುದಲ್ಲವೇ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.