ಮದುವೆಗಾಗಿ ಡಬ್ಲ್ಯುಟಿಸಿ ಅವಕಾಶ ಕೈ ಬಿಟ್ಟ ಋತುರಾಜ್ ಗಾಯಕ್ ವಾಡ್

ಮಂಗಳವಾರ, 30 ಮೇ 2023 (09:10 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಅವಕಾಶ ಸಿಗುವುದೇ ತಮ್ಮ ಅದೃಷ್ಟ ಎಂದು ಯುವ ಕ್ರಿಕೆಟಿಗರು ಕಾಯುತ್ತಿರುತ್ತಾರೆ. ಆದರೆ ಋತುರಾಜ್ ಗಾಯಕ್ ವಾಡ್‍ ಡಬ್ಲ್ಯುಟಿಸಿ ಫೈನಲ್ ಆಡುವ ಟೀಂ ಇಂಡಿಯಾ ಪ್ರತಿನಿಧಿಸುವ ಅವಕಾಶ ಕಳೆದುಕೊಂಡಿದ್ದಾರೆ.

ಋತುರಾಜ್ ಗಾಯಕ್ ವಾಡ್ ಇದೇ ವಾರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಮದುವೆಗಾಗಿ ಋತುರಾಜ್ ಗಾಯಕ್ ವಾಡ್‍ ಡಬ್ಲ್ಯುಟಿಸಿ ಫೈನಲ್ ಆಡಲಿರುವ ಟೀಂ ಇಂಡಿಯಾ ಪ್ರತಿನಿಧಿಸುತ್ತಿಲ್ಲ.

ಋತುರಾಜ್ ಗಾಯಕ್ ವಾಡ್ ಹೇಗಿದ್ದರೂ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ. ಹೀಗಾಗಿ ತಮ್ಮ ವೈಯಕ್ತಿಕ ಜೀವನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದ ಗಾಯಕ್ ವಾಡ್ ಗೆ ಟೀಂ ಇಂಡಿಯಾ ಕರೆ ಬಂದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ