ಐಪಿಎಲ್ ಫೈನಲ್ ಗೆದ್ದ ಬೆನ್ನಲ್ಲೇ ಫ್ಯಾನ್ಸ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಧೋನಿ

ಮಂಗಳವಾರ, 30 ಮೇ 2023 (08:20 IST)
Photo Courtesy: Twitter
ಅಹಮ್ಮದಾಬಾದ್: ಐದನೇ ಬಾರಿಗೆ ಐಪಿಎಲ್ ಚಾಂಪಿಯನ್ ಆದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ತಮ್ಮ ಅಭಿಮಾನಿಗಳಿಗೆ ಖುಷಿಕೊಡುವ ಸುದ್ದಿಯೊಂದನ್ನು ನೀಡಿದ್ದಾರೆ.

ಧೋನಿಗೆ ಇದೇ ಕೊನೆಯ ಐಪಿಎಲ್ ಎನ್ನಲಾಗುತ್ತಿತ್ತು. ಆದರೆ ಈ ಗೆಲುವಿನ ಬಳಿಕ ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ಪ್ರೀತಿಗೆ ಭಾವುಕರಾದ ಧೋನಿ ಇನ್ನೊಂದು ಸೀಸನ್ ನಲ್ಲಿ ಆಡಲು ನಿರ್ಧರಿಸಿದ್ದಾರೆ. ಅಹಮ್ಮದಾಬಾದ್ ನಲ್ಲಿಯೂ ತವರಿನಲ್ಲಿ ಆಡುತ್ತಿರುವಂತೆ ಅಷ್ಟೇ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಬೆಂಬಲ ನೀಡಿರುವುದನ್ನು ನೋಡಿದರೆ ನನಗೆ ಮಾತೇ ಹೊರಡುತ್ತಿಲ್ಲ. ಇವರ ಈ ಪ್ರೀತಿಗೆ ಬದಲಾಗಿ ನಾನು ಒಂದು ಗಿಫ್ಟ್ ನೀಡುತ್ತೇನೆ. ನನಗೆ ಕಷ್ಟವಾದರೂ ಸರಿ, ಇನ್ನೊಂದು ಸೀಸನ್ ಐಪಿಎಲ್ ಆಡುತ್ತೇನೆ ಎಂದು ಘೋಷಿಸಿದ್ದಾರೆ.

ಚೆನ್ನೈ ಗೆಲುವಿನ ಬಳಿಕ ರವೀಂದ್ರ ಜಡೇಜಾರನ್ನು ಎತ್ತಿಕೊಂಡು ಚಿಕ್ಕಮಗುವಿನಂತೆ ಧೋನಿ ಬಿಕ್ಕಿ ಬಿಕ್ಕಿ ಅತ್ತರು. ಅವರು ಈ ಐಪಿಎಲ್ ಗೆಲುವಿನ ಬಳಿಕ ತೀರಾ ಭಾವುಕರಾದಂತೆ ಕಂಡುಬಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ