ಸಚಿನ್, ಯೂಸುಫ್ ಪಠಾಣ್ ಬಳಿಕ ಮತ್ತೊಬ್ಬ ಕ್ರಿಕೆಟಿಗನಿಗೆ ಕೊರೋನಾ ಸೋಂಕು

ಸೋಮವಾರ, 29 ಮಾರ್ಚ್ 2021 (10:59 IST)
ಮುಂಬೈ: ರೋಡ್ ಸೇಫ್ಟೀ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿದ ಸಚಿನ್ ತೆಂಡುಲ್ಕರ್, ಯೂಸುಫ್ ಪಠಾಣ್ ಗೆ ಕೊರೋನಾ ಸೋಂಕು ತಗುಲಿದ ಸುದ್ದಿಯ ಬೆನ್ನಲ್ಲೇ ಭಾರತದ ಮತ್ತೊಬ್ಬ ಕ್ರಿಕೆಟಿಗ ತನಗೂ ಕೊರೋನಾ ತಗುಲಿರುವುದಾಗಿ ಪ್ರಕಟಿಸಿದ್ದಾರೆ.


ಭಾರತೀಯ ಕ್ರಿಕೆಟಿಗ ಎಸ್ ಬದರೀನಾಥ್ ಕೊರೋನಾ ಸೋಂಕಿಗೊಳಗಾಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ಸಣ್ಣ ಪ್ರಮಾಣದ ಲಕ್ಷಣಗಳೊಂದಿಗೆ ತಮಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ಬದರೀನಾಥ್ ಹೇಳಿದ್ದಾರೆ.

ಇದರೊಂದಿಗೆ ಕೊರೋನಾ ಎರಡನೇ ಅಲೆಯ ಭೀತಿ ಹೆಚ್ಚಾಗಿದೆ. ಆಗಾಗ ಚೆಕಪ್ ಮಾಡಿಸುತ್ತಿದ್ದರೂ, ಸುರಕ್ಷತೆ ಕೈಗೊಂಡಿದ್ದರೂ ನನಗೂ ಕೊರೋನಾ ಸೋಂಕು ದೃಢಪಟ್ಟಿದೆ. ನನ್ನ ವೈದ್ಯರ ಸಲಹೆ ಪಾಲಿಸುತ್ತಿದ್ದೇನೆ. ಇದೀಗ ಹೋಂ ಕ್ವಾರಂಟೈನಲ್ಲಿದ್ದೇನೆ ಎಂದು ಬದರೀನಾಥ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ