ಡಬ್ಲ್ಯುಪಿಎಲ್ ನಲ್ಲಿ ಮಿಂಚುತ್ತಿರುವ ಬೌಲರ್ ಸೈಕಾ ಇಸಾಕ್ ಯಾರು?

ಶನಿವಾರ, 11 ಮಾರ್ಚ್ 2023 (08:40 IST)
Photo Courtesy: Twitter
ಮುಂಬೈ: ಮಹಿಳಾ ಕ್ರಿಕೆಟ್ ನಲ್ಲಿ ಇದೀಗ ಚಾಲ್ತಿಯಲ್ಲಿರುವ ಹೆಸರು ಸೈಕಾ ಐಸಾಕ್. ಪ್ರಸಕ್ತ ನಡೆಯುತ್ತಿರುವ ಡಬ್ಲ್ಯುಪಿಎಲ್ ನಲ್ಲಿ ಸೆನ್ಸೇಷನ್ ಹುಟ್ಟು ಹಾಕಿರುವ ಬೌಲರ್.

ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಸೈಕಾ ಬೆಂಗಾಳಿ ಮೂಲದ ಸ್ಪಿನ್ ಬೌಲರ್. ಈ ಡಬ್ಲ್ಯುಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ. ಸೈಕಾ ಈಗ ನೀಡುತ್ತಿರುವ ಪ್ರದರ್ಶನ ನೋಡಿದರೆ ಆಕೆಗೆ ಭಾರತೀಯ ತಂಡದಲ್ಲಿ ಅವಕಾಶ ಸಿಗುವುದು ಗ್ಯಾರಂಟಿ.

ಮೂಲತಃ ಬಂಗಾಳದವರಾದ ಸೈಕಾಗೆ ಹರ್ಭಜನ್ ಸಿಂಗ್ ಆದರ್ಶ. ದೇಶೀಯ ಕ್ರಿಕೆಟ್, ಕ್ಲಬ್ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದ ಪ್ರತಿಭೆಯನ್ನು ಗುರುತಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕರೆತಂದವರು ಬೌಲಿಂಗ್ ಕೋಚ್ ಜೂಲಾನ್ ಗೋಸ್ವಾಮಿ. ಆಕೆಗೆ ಮೊದಲ ಕ್ರಿಕೆಟ್ ಕೊಟ್ಟಿದ್ದೂ ಇದೇ ಜೂಲಾನ್ ಗೋಸ್ವಾಮಿಯಂತೆ.

ಆಕೆಯಲ್ಲಿದ್ದ ಕ್ರಿಕೆಟ್ ಬಗೆಗಿನ ಆಸಕ್ತಿ ಗಮನಿಸಿ ಪ್ರೋತ್ಸಾಹಿಸಿದವರು ತಂದೆ. ಆದರೆ 15 ವರ್ಷಗಳ ಹಿಂದೆಯೇ ಸೈಕಾ ತಂದೆಯನ್ನು ಕಳೆದುಕೊಂಡಿದ್ದಾರೆ. ಅಂಡರ್ 19, ಅಂಡರ್ 23 ಬೆಂಗಾಳ ತಂಡದ ಪರ ಆಡುತ್ತಿದ್ದ ಸೈಕಾ ಗಾಯದಿಂದಾಗಿ ಎರಡು ವರ್ಷ ಕ್ರಿಕೆಟ್ ನಿಂದ ದೂರವುಳಿಯಬೇಕಾಯಿತು. 27 ವರ್ಷದ ಐಸಾಕ್ ಈಗಾಗಲೇ ಮೂರು ಪಂದ್ಯಗಳಿಂದ 9 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಈ ಡಬ್ಲ್ಯುಪಿಎಲ್ ನ ಅತೀ ದೊಡ್ಡ ಪ್ಲಸ್ ಪಾಯಿಂಟ್ ಎನ್ನಬಹುದು. ಸದ್ಯದಲ್ಲೇ ಆಕೆಗೆ ಟೀಂ ಇಂಡಿಯಾ ಕರೆ ಸಿಗುವುದರಲ್ಲಿ ಅನುಮಾನವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ