ಭಾರತ-ಪಾಕ್ ಮ್ಯಾಚ್ ನೋಡಲು ಲಂಡನ್ ತಲುಪಿದ ಸಾನಿಯಾ ಮಿರ್ಜಾ

ಭಾನುವಾರ, 16 ಜೂನ್ 2019 (09:15 IST)
ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ನಡೆಯಲಿರುವ ವಿಶ್ವಕಪ್ ಕೂಟದ ಮಹತ್ವದ ಪಂದ್ಯ ವೀಕ್ಷಿಸಲು ಸೆಲೆಬ್ರಿಟಿಗಳ ದಂಡೇ ಹರಿದುಬರುತ್ತಿದೆ.


ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿಯೂ ಆಗಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಈಗಾಗಲೇ ಪುತ್ರ ಇಝಾನ್ ಸಮೇತ ಲಂಡನ್ ನಲ್ಲಿ ಬೀಡುಬಿಟ್ಟಿದ್ದಾರೆ. ಪುತ್ರನ ಜತೆಗಿನ ಹಲವು ಫೋಟೋಗಳನ್ನು ಸಾನಿಯಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪತಿ ಶೊಯೇಬ್ ಗೆ ಮತ್ತು ಭಾರತ ತಂಡಕ್ಕೆ ಚಿಯರ್ಸ್ ಹೇಳುವುದು ಪಕ್ಕಾ ಆಗಿದೆ.

ಇನ್ನು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಧೋನಿ ಪತ್ನಿ ಸಾಕ್ಷಿ ಮತ್ತಿತರರೂ ಮೈದಾನದಲ್ಲಿ ಹಾಜರಿರಲಿದ್ದಾರೆ. ಆದರೆ ಅತ್ತ ಪಾಕಿಸ್ತಾನ ತಂಡದ ಕ್ರಿಕೆಟಿಗರಿಗೆ ಪಾಕ್ ಕ್ರಿಕೆಟ್ ಮಂಡಳಿ ಭಾರತದ ವಿರುದ್ಧದ ಪಂದ್ಯದ ನಂತರವಷ್ಟೇ ಪತ್ನಿಯರನ್ನು ಕರೆತರಬಹುದು ಎಂದು ನಿರ್ಬಂಧ ಹೇರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ