ಬ್ಯಾಟಿಂಗ್ ಕೋಚ್ ಸ್ಥಾನದಿಂದ ವಜಾ ಮಾಡಿದ್ದಕ್ಕೆ ಕಿತ್ತಾಡಿದ್ದ ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್

ಗುರುವಾರ, 5 ಸೆಪ್ಟಂಬರ್ 2019 (09:14 IST)
ಮುಂಬೈ: ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಹುದ್ದೆಯಿಂದ ಇತ್ತೀಚೆಗಷ್ಟೇ ವಜಾಗೊಂಡಿದ್ದ ಸಂಜಯ್ ಬಂಗಾರ್ ಇದಕ್ಕೂ ಮೊದಲು ಬಿಸಿಸಿಐ ಆಯ್ಕೆ ಸಮಿತಿ ಜತೆ ಕಿತ್ತಾಡಿದ್ದರು ಎಂಬ ಅಂಶವನ್ನು ಆಂಗ್ಲ ಮಾಧ್ಯಮವೊಂದು ಹೊರ ಹಾಕಿದೆ.


ಬಂಗಾರ್ ಸಹಾಯಕ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದಾಗ ಆಯ್ಕೆ ಸಮಿತಿ ಸದಸ್ಯ ದೇವಾಂಗ್ ಗಾಂಧಿ ಕೊಠಡಿಗೆ ತೆರಳಿ ಕಿತ್ತಾಡಿದ್ದರಂತೆ. ನನ್ನನ್ನು ಕೋಚ್ ಸ್ಥಾನದಿಂದ ಕಿತ್ತು ಹಾಕಿದರೆ ಚೆನ್ನಾಗಿರಲ್ಲ. ಮುಂದೊಂದು ದಿನ ತನ್ನ ಬಳಿ ಮತ್ತೆ ಕೋಚ್ ಆಗಿ ಕೆಲಸ ಮಾಡುವಂತೆ ಕೇಳಿಕೊಂಡು ಬರಬೇಕಾದೀತು ಎಂದೆಲ್ಲಾ ಬಾಯಿಗೆ ಬಂದಂತೆ ಹರಿಹಾಯ್ದಿದ್ದರು ಎನ್ನಲಾಗಿದೆ.

ಆದರೆ ಬಿಸಿಸಿಐಗೆ ಸಂಜಯ್ ಬಂಗಾರ್ ರನ್ನು ಮತ್ತೆ ಮುಂದುವರಿಸಲು ಇಚ್ಛೆಯಿರಲಿಲ್ಲ. ಅವರ ವರ್ತನೆ ಬಗ್ಗೆ ಅಸಮಾಧಾನವಿತ್ತು. ಅದರಲ್ಲೂ ಧೋನಿಯಂತಹ ಬ್ಯಾಟ್ಸ್ ಮನ್ ಗಳನ್ನು ಮೇಲಿನ ಕ್ರಮಾಂಕದಲ್ಲಿ ಆಡಿಸಲು ಬಂಗಾರ್ ಒಪ್ಪಿರಲಿಲ್ಲ. ಇದು ವಿವಾದಕ್ಕೂ ಕಾರಣವಾಗಿತ್ತು. ಇಂತಹ ಅನೇಕ ನಿರ್ಧಾರಗಳು ಬಿಸಿಸಿಐಗೆ ಇಷ್ಟವಾಗಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ