ಐಪಿಎಲ್ 2024 ರಲ್ಲಿ ರಿಷಬ್ ಅಲ್ಲದೆ ನಿಷೇಧದ ಭೀತಿಯಲ್ಲಿರುವ ಕ್ಯಾಪ್ಟನ್ ಗಳು ಇವರೇ ನೋಡಿ

Krishnaveni K

ಸೋಮವಾರ, 13 ಮೇ 2024 (14:31 IST)
ಮುಂಬೈ: ಐಪಿಎಲ್ 2024 ರಲ್ಲಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಒಂದು ಪಂದ್ಯದ ನಿಷೇಧಕ್ಕೊಳಗಾಗಿದ್ದಾರೆ. ಆದರೆ ಅವರ ಜೊತೆಗೆ ಇನ್ನೂ ಕೆಲವು ನಾಯಕರು ನಿಷೇಧದ ಭೀತಿಯಲ್ಲಿದ್ದಾರೆ.

ಐಪಿಎಲ್ ನಿಯಮಗಳ ಪ್ರಕಾರ ನಿಧಾನಗತಿಯ ಓವರ್ ಮಾಡಿದರೆ ಆಯಾ ತಂಡದ ನಾಯಕನಿಗೆ ದುಬಾರಿ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಗೆ ತಪ್ಪು ಮಾಡಿದಾಗ 12 ಲಕ್ಷ ರೂ. ಮತ್ತು ಎರಡನೇ ಬಾರಿ ತಪ್ಪು ಪುನರಾವರ್ತನೆಯಾದಾಗ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ಇದೀಗ ರಿಷಬ್ ಪಂತ್ ಗೂ ಅದೇ ರೀತಿ ಮೂರನೇ ಬಾರಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಶಿಕ್ಷೆಯಾಗಿತ್ತು. ಆದರೆ ಈ ಐಪಿಎಲ್ ನಲ್ಲಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಈಗಾಗಲೇ ದಂಡ ತೆತ್ತಿರುವ ನಾಯಕರಿದ್ದಾರೆ. ಆ ಪೈಕಿ ಶುಬ್ಮನ್ ಗಿಲ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಈಗಾಗಲೇ ಎರಡು ಬಾರಿ ನಿಧಾನಗತಿಯ ಓವರ್ ಮಾಡಿ ದಂಡ ತೆತ್ತಿದ್ದಾರೆ.

ಇಬ್ಬರೂ ಈಗಾಗಲೇ ಎರಡು ಬಾರಿ ನಿಧಾನಗತಿಯ ಓವರ್ ಮಾಡಿ 24 ಲಕ್ಷ ರೂ. ದಂಡ ತೆತ್ತಿದ್ದಾರೆ. ಇದೀಗ ಐಪಿಎಲ್ ನಿರ್ಣಾಯಕ ಹಂತದಲ್ಲಿದ್ದು ಈ ಹಂತದಲ್ಲಿ ಇಬ್ಬರೂ ನಾಯಕರೂ ಮತ್ತೆ ಅದೇ ತಪ್ಪು ಮಾಡಿದರೆ ಒಂದು ಪಂದ್ಯದ ನಿಷೇಧಕ್ಕೊಳಗಾಗಬೇಕಾಗುತ್ತದೆ. ಅಲ್ಲದೆ, ಇದು ನಿರ್ಣಾಯಕ ಹಂತದಲ್ಲಿ ತಂಡಕ್ಕೆ ದುಬಾರಿಯಾಗಬಹುದು. ಈ ಪೈಕಿ ಮುಂಬೈ ಪ್ಲೇ ಆಫ್ ನಿಂದ ಹೊರಬಿದ್ದಿದೆ. ಗುಜರಾತ್ ಕೂಡಾ ಪ್ಲೇ ಆಫ್ ಗೇರುವುದು ಅನುಮಾನ. ಹೀಗಾಗಿ ಸಂಜು ಸ್ಯಾಮ್ಸನ್ ಎಲ್ಲರಿಗಿಂತ ಹೆಚ್ಚು ಎಚ್ಚರಿಕೆಯಲ್ಲಿರಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ