ಟೆಸ್ಟ್ ಸರಣಿಗೂ ಮೊದಲೇ ಸುತ್ತಾಡುವುದರಲ್ಲೇ ಶಿಖರ್ ಧವನ್ ಬ್ಯುಸಿ

ಭಾನುವಾರ, 22 ಜುಲೈ 2018 (09:27 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಕ್ರಿಕೆಟ್ ಬಿಟ್ಟು ತಮ್ಮ ಕುಟುಂಬದವರ ಜತೆ ಸುತ್ತಾಡುವುದರಲ್ಲೇ ಬ್ಯುಸಿಯಾಗಿದ್ದಾರೆ.

ಏಕದಿನ ಸರಣಿಯಲ್ಲಿ ಕಳಪೆ ಫಾರ್ಮ್ ನಿಂದ ಟೀಕೆಗೊಳಗಾಗಿದ್ದರೂ ಧವನ್ ಗೆ ಅಭ್ಯಾಸದ ಕಡೆಗೆ ಮನಸ್ಸಾದಂತೆ ತೋರುತ್ತಿಲ್ಲ. ಮೊನ್ನೆಯಷ್ಟೇ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜತೆಗೆ ಹೊರಗಡೆ ಸುತ್ತಾಡಿದ ಫೋಟೋ ಹಾಕಿಕೊಂಡಿದ್ದ ಧವನ್ ಇದೀಗ ಮತ್ತೆ ಕುಟುಂಬ ಸಮೇತರಾಗಿ ಇಂಗ್ಲೆಂಡ್ ನ ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಅಡ್ಡಾಡುತ್ತಿರುವ ಫೋಟೋ ಪ್ರಕಟಿಸಿಕೊಂಡಿದ್ದಾರೆ.

ಅಂತೂ ಇಂಗ್ಲೆಂಡ್ ಪ್ರವಾಸವನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ತಮ್ಮ ಫಾರ್ಮ್ ಬಗ್ಗೆಯೂ ಇಷ್ಟೇ ಕಾಳಜಿ ವಹಿಸಿ ಆಡಿದರೆ ಭಾರತ ಟೆಸ್ಟ್ ಸರಣಿ ಗೆಲ್ಲುವುದು ಸುಲಭವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ