ಪಾಕಿಸ್ತಾನ ತಂಡ ಭಾರತಕ್ಕೆ ಹೋಗಿ ಅಲ್ಲಿಯೇ ಅವರನ್ನು ಸೋಲಿಸಿ ಬರಬೇಕು: ಶೊಯೇಬ್ ಅಖ್ತರ್

Krishnaveni K

ಸೋಮವಾರ, 2 ಡಿಸೆಂಬರ್ 2024 (17:32 IST)
Photo Credit: X
ಇಸ್ಲಾಮಾಬಾದ್: ಪಾಕಿಸ್ತಾನ ತಂಡ ಭಾರತಕ್ಕೆ ಹೋಗಬೇಕು, ಆ ಬಳಿಕ ಅವರನ್ನು ಅಲ್ಲಿಯೇ ಸೋಲಿಸಿ ಬರಬೇಕು. ಹೀಗಂತ ಪಾಕ್ ಮಾಜಿ  ವೇಗಿ ಶೊಯೇಬ್ ಅಖ್ತರ್ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಪ್ಪಿಗೆ ನೀಡಿದ ಬೆನ್ನಲ್ಲೇ ಪಿಸಿಬಿ ಕೆಲವು ಷರತ್ತುಗಳನ್ನು ಐಸಿಸಿ ಮುಂದಿಟ್ಟಿತ್ತು. ಇದರಲ್ಲಿ ಭಾರತ ಆತಿಥ್ಯ ವಹಿಸುವ ಐಸಿಸಿ ಟೂರ್ನಿಗಳನ್ನೂ ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು, ಪಾಕಿಸ್ತಾನ ತಂಡ ಭಾರತಕ್ಕೆ ಹೋಗಲ್ಲ ಮತ್ತು ಐಸಿಸಿ ಆದಾಯದ ಪಾಲಿನಲ್ಲಿ ಹೆಚ್ಚಳ ಮಾಡಬೇಕು ಎಂದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶೊಯೇಬ್ ಅಖ್ತರ್, ಪಿಸಿಬಿ ವಿಧಿಸಿರುವ ಷರತ್ತುಗಳಲ್ಲಿ ಆದಾಯದ ಪಾಲು ಹೆಚ್ಚಳ ಮತ್ತು ಹೈಬ್ರಿಡ್ ಮಾದರಿಯನ್ನು ಒಪ್ಪಬಹುದು. ಆದರೆ ಪಾಕಿಸ್ತಾನ ತಂಡ ಭಾರತಕ್ಕೆ ಹೋಗುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲಾಗದು. ನಾವು ಯಾಕೆ ಹೋಗಬಾರದು? ಪಾಕಿಸ್ತಾನ ತಂಡ ಭಾರತಕ್ಕೆ ಹೋಗಬೇಕು. ಭಾರತದ ನೆಲದಲ್ಲಿಯೇ ಅವರನ್ನು ಸೋಲಿಸಿ ಬರಬೇಕು ಎಂದು ಅಖ್ತರ್ ಹೇಳಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಾನು ಆಡುವ ಪಂದ್ಯಗಳನ್ನು ಭಾರತ ಯುಎಇನಲ್ಲಿ ಆಡಲಿದೆ. ಪಾಕಿಸ್ತಾನಕ್ಕೆ ಹೋಗಲು ಭಾರತ ಸರ್ಕಾರದ ಅನುಮತಿಯಿಲ್ಲದ ಕಾರಣ ಬಿಸಿಸಿಐ ಟೀಂ ಇಂಡಿಯಾವನ್ನು ಪಾಕ್ ಗೆ ಕಳುಹಿಸಲು ಒಪ್ಪಿರಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ