ಜಯ್ ಶಾ ಐಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಹೊಸ ಭಯ

Krishnaveni K

ಬುಧವಾರ, 28 ಆಗಸ್ಟ್ 2024 (14:32 IST)
ದುಬೈ: ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗುತ್ತಿದ್ದಂತೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಆತಂಕ ಶುರುವಾಗಿದೆ. ಅದಕ್ಕೆ ಕಾರಣವೇನು ಇಲ್ಲಿದೆ ವಿವರ.

ಜಯ್ ಶಾ ಐಸಿಸಿ ಅಧ್ಯಕ್ಷರಾಗುವ ಮೂಲಕ ಹೊಸ ದಾಖಲೆಯನ್ನೂ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಐಸಿಸಿ ಅಧ್ಯಕ್ಷರಾದ ದಾಖಲೆ ಮಾಡಿದ್ದಾರೆ. ಜಯ್ ಶಾ ಐಸಿಸಿ ಅಧ್ಯಕ್ಷರಾಗಿರುವುದರಿಂದ ಭಾರತಕ್ಕೆ ಖುಷಿಯಾಗಿದೆ. ಆದರೆ ನೆರೆಯ ಪಾಕಿಸ್ತಾನಕ್ಕೆ ಆತಂಕ ಶುರುವಾಗಿದೆ.

ಮುಂದಿನ ವರ್ಷ ಆರಂಭದಲ್ಲಿ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾಗಿಯಾಗಲು ಪಾಕಿಸ್ತಾನಕ್ಕೆ ತೆರಳಲು ಭಾರತ ಹಿಂದೇಟು ಹಾಕುತ್ತಿದೆ. ಹೀಗಾಗಿ ಭಾರತ ಆಡುವ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಿ ಎಂದು ಬೇಡಿಕೆಯಿಡುತ್ತಲೇ ಇದೆ.

ಆದರೆ ಈಗ ಜಯ್ ಶಾ ಐಸಿಸಿ ಅಧ್ಯಕ್ಷರಾಗಿರುವುದರಿಂದ ಚಾಂಪಿಯನ್ಸ್ ಟ್ರೋಫಿಯನ್ನೇ ಭದ್ರತಾ ನೆಪವೊಡ್ಡಿ ಪಾಕಿಸ್ತಾನದಿಂದಲೇ ಎತ್ತಂಗಡಿ ಮಾಡಿದರೆ ಎಂಬ ಆತಂಕ ಪಾಕಿಸ್ತಾನಕ್ಕೆ ಶುರುವಾಗಿದೆ. ಭಾರತ ಇನ್ನೂ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ಬಗ್ಗೆ ತೀರ್ಮಾನ ಪ್ರಕಟಿಸಿಲ್ಲ. ಭಾರತ ಆಡುವ ಪಂದ್ಯಗಳ ಬಗ್ಗೆ ಇನ್ನೂ ಐಸಿಸಿ ತೀರ್ಮಾನ ಮಾಡಿಲ್ಲ. ಹೀಗಾಗಿ ಜಯ್ ಶಾ ಅಧ್ಯಕ್ಷರಾಗಿರುವುದು ಭಾರತಕ್ಕೆ ಖುಷಿಯಾದರೆ ಪಾಕಿಸ್ತಾನಕ್ಕೆ ಆತಂಕ ತಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ