ಅಫ್ರಿದಿ ಬಳಿಕ ಶೊಯೇಬ್ ಅಖ್ತರ್ ನಿಂದ ವಿರಾಟ್ ಕೊಹ್ಲಿ ‘ನಿವೃತ್ತಿ’ ಬಗ್ಗೆ ಹೇಳಿಕೆ

ಗುರುವಾರ, 15 ಸೆಪ್ಟಂಬರ್ 2022 (10:29 IST)
ಮುಂಬೈ: ಇತ್ತೀಚೆಗೆ ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ವಿರಾಟ್ ಕೊಹ್ಲಿ ಈಗಲೇ ನಿವೃತ್ತಿಯಾಗುವುದು ಉತ್ತಮ ಎಂದು ಸಾಕಷ್ಟು ಟ್ರೋಲ್ ಗೊಳಗಾಗಿದ್ದರು. ಇದೀಗ ಮತ್ತೊಬ್ಬ ಪಾಕ್ ತಾರೆ ಶೊಯೇಬ್ ಅಖ್ತರ್ ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಶೊಯೇಬ್ ಕೊಹ್ಲಿ ಟಿ20 ವಿಶ್ವಕಪ್ ಬಳಿಕ ನಿವೃತ್ತರಾಗಬಹುದು ಎಂದು ಹೇಳಿಕೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್ ನಿಂದ ನಿವೃತ್ತರಾಗಿ ಸುದೀರ್ಘ ಮಾದರಿಯ ಕ್ರಿಕೆಟ್ ನಲ್ಲಿ ಗಮನಹರಿಸಬಹುದು. ನಾನಾಗಿದ್ದರೆ ಇದೇ ಕೆಲಸ ಮಾಡುತ್ತಿದ್ದೆ ಎಂದು ಅಖ್ತರ್ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ