Gautam Gambhir: ಪೆಟ್ರೋಲ್ ಬಂಕ್ ಫೀಲ್ ಬರ್ತಾ ಇದ್ಯಲ್ಲೋ.. ಟ್ರೋಲ್ ಆಯ್ತು ಟೀಂ ಇಂಡಿಯಾ ಹೊಸ ಜೆರ್ಸಿ
ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ಗಾಢ ನೀಲಿ ಮತ್ತು ಹಳದಿ ಬಣ್ಣದ ಶೇಡ್ ಇರುವ ಹೊಸ ಜೆರ್ಸಿಯನ್ನು ಗೌತಮ್ ಗಂಭೀರ್ ಮತ್ತು ಗಿಲ್ ತೊಟ್ಟಿದ್ದರು. ಇಬ್ಬರೂ ಜೊತೆಗೇ ನಿಂತು ನಗು ನಗುತ್ತಾ ಫೋಟೋಗೂ ಪೋಸ್ ಕೊಟ್ಟಿದ್ದಾರೆ.
ಆದರೆ ಈ ಫೋಟೋಗಳನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಇದೇ ಕಲರ್ ನ ಡ್ರೆಸ್ ಪೆಟ್ರೋಲ್ ಬಂಕ್ ಸಿಬ್ಬಂದಿ ತೊಡುತ್ತಾರೆ. ಹೀಗಾಗಿ ಇದನ್ನು ನೋಡುತ್ತಿದ್ದರೆ ಪೆಟ್ರೋಲ್ ಬಂಕ್ ಫೀಲ್ ಬರುತ್ತಿದೆ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ.
ಇನ್ನು, ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ನತ್ತ ಪ್ರಯಾಣ ಬೆಳೆಸಿದೆ. ಈಗಾಗಲೇ ಒಂದು ಬ್ಯಾಚ್ ಇಂಗ್ಲೆಂಡ್ ನಲ್ಲಿ ಬೀಡುಬಿಟ್ಟಿದೆ. ಇದೀಗ ಐಪಿಎಲ್ ಮುಗಿಸಿದ ಪ್ರಮುಖ ಆಟಗಾರರು ಇಂಗ್ಲೆಂಡ್ ಗೆ ತೆರಳಿದ್ದಾರೆ.