ಬೆಂಗಳೂರು: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡಬ್ಲ್ಲುಪಿಎಲ್ ಟೂರ್ನಿ ಫೈನಲ್ ಪಂದ್ಯ ಗೆದ್ದು ಸಂಭ್ರಮಿಸಿತ್ತು. ಈ ಬಗ್ಗೆ ತೆಲುಗು ನಟ ಸಿದ್ಧಾರ್ಥ್ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ 8 ವಿಕೆಟ್ ಗಳ ಗೆಲುವು ಸಾಧಿಸಿ ಸಂಭ್ರಮಿಸಿತ್ತು. ಈ ಗೆಲುವಿನ ಬಳಿಕ ಆರ್ ಸಿಬಿ ಫ್ಯಾನ್ಸ್ ಪೈಕಿ ಮಹಿಳೆಯರು ಯಾರೂ ಸಂಭ್ರಮಿಸಲಿಲ್ಲ. ಕೇವಲ ಪುರುಷರು ಮಾತ್ರ ರಸ್ತೆಯಲ್ಲಿ ನಿಂತು ಸಂಭ್ರಮಿಸಿದರು ಎಂದು ನಟ ಸಿದ್ಧಾರ್ಥ್ ವ್ಯಂಗ್ಯ ಮಾಡಿದ್ದಾರೆ.
ಒಂದು ಟೂರ್ನಿಯಲ್ಲಿ ಮಹಿಳೆಯರು ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಪ್ರಶಸ್ತಿಯನ್ನು ಸಂಭ್ರಮಿಸಲು ಒಬ್ಬರೇ ಒಬ್ಬ ಮಹಿಳಾ ಫ್ಯಾನ್ಸ್ ರಸ್ತೆಗಿಳದಿಲ್ಲ. ಭಾರತದ ಪುರುಷ ಪ್ರಧಾನ ವ್ಯವಸ್ಥೆಗೆ ಇದು ತಕ್ಕ ಉದಾಹರಣೆ ಎಂದು ಸಿದ್ಧಾರ್ಥ್ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ವ್ಯಂಗ್ಯ ಮಾಡಿದ್ದಾರೆ.
ರಾತ್ರಿಯ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಬರಲು ಭಾರತದ ಮಹಿಳೆಯರಿಗೆ ಅವಕಾಶ ಇಲ್ಲ ಎಂಬುದನ್ನು ತಿಳಿಸಲು ಈ ಟ್ವೀಟ್ ಮಾಡಿದ್ದೇನೆ. ಸ್ತ್ರೀಯರ ದೊಡ್ಡ ಗೆಲುವನ್ನು ಬೀದಿಯಲ್ಲಿ ಸಂಭ್ರಮಿಸಲು ಪುರುಷರ ರೀತಿ ಮಹಿಳೆಯರಿಗೆ ಸಾಧ‍್ಯವಾಗಿಲ್ಲ ಎಂಬ ವ್ಯಂಗ್ಯ ಇದರಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.