ಈ ಗೆಲುವು ಅಭಿಮಾನಿಗಳಿಗಾಗಿ: ಪಂದ್ಯ ಗೆದ್ದ ಬಳಿಕ ಆರ್ ಸಿಬಿ ನಾಯಕಿ ಹೇಳಿಕೆ

ಗುರುವಾರ, 16 ಮಾರ್ಚ್ 2023 (08:50 IST)
Photo Courtesy: Twitter
ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ಮೊದಲ ಜಯ ದಾಖಲಿಸಿದ ಬಳಿಕ ಆರ್ ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧನಾ ಗೆಲುವು ಅಭಿಮಾನಿಗಳಿಗಾಗಿ ಎಂದಿದ್ದಾರೆ.

ಒಂದು ಹಂತದಲ್ಲಿ ಆರ್ ಸಿಬಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಆರ್ ಸಿಬಿ ಅಭಿಮಾನಿಗಳು ಈ ಪಂದ್ಯ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದರು. ಕಳೆದ ಐದು ಪಂದ್ಯಗಳನ್ನು ಸೋತರೂ ಅಪ್ಪಟ ಅಭಿಮಾನಿಗಳು ಮಾತ್ರ ನಿಷ್ಠೆ ಬದಲಾಯಿಸಿರಲಿಲ್ಲ.

ಹೀಗಾಗಿ ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿರುವ ಕೊಹ್ಲಿ ‘ನಾವು ಇಷ್ಟು ಸೋಲು ಅನುಭವಿಸಿದರೂ ಮೈದಾನಕ್ಕೆ ಬಂದು ನಮ್ಮ ಹೆಸರೆತ್ತಿ ಕರೆದು ಬೆಂಬಲಿಸುತ್ತಿದ್ದರು. ಅಭಿಮಾನಿಗಳ ಬಗ್ಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಅಂತಹ ನಂಬಿಕೆ ಅವರಿಗೆ ನಮ್ಮ ಮೇಲಿದೆ. ಅಷ್ಟು ವಿಧೇಯ ಅಭಿಮಾನಿಗಳು ಈ ಫ್ರಾಂಚೈಸಿಗಿದ್ದಾರೆ. ಅವರಿಗಾಗಿಯೇ ಈ ಗೆಲುವು’ ಎಂದು ಸ್ಮೃತಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ