ಪಂದ್ಯಕ್ಕೆ ಮುನ್ನ ಆರ್ ಸಿಬಿ ಮಹಿಳೆಯರನ್ನು ಭೇಟಿ ಮಾಡಿದ್ದ ವಿರಾಟ್ ಕೊಹ್ಲಿ

ಗುರುವಾರ, 16 ಮಾರ್ಚ್ 2023 (08:40 IST)
Photo Courtesy: Twitter
ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ಕೊನೆಗೂ ಯುಪಿ ವಾರಿಯರ್ಸ್ ವಿರುದ್ಧ ಮೊದಲ ಗೆಲುವು ಕಂಡಿದೆ.

ಸತತ ಐದು ಸೋಲಿನಿಂದ ಕಂಗೆಟ್ಟಿದ್ದ ಆರ್ ಸಿಬಿ ಮಹಿಳೆಯರಲ್ಲಿ ನಿನ್ನೆ ಹೊಸ ಶಕ್ತಿ ಬಂದಂತಾಗಿತ್ತು. ಇದಕ್ಕೆ ಕಾರಣವಾಗಿದ್ದು ವಿರಾಟ್ ಕೊಹ್ಲಿ ಆಗಮನ.

ನಿನ್ನೆಯ ಪಂದ್ಯಕ್ಕೆ ಮುನ್ನ ಆರ್ ಸಿಬಿ ಮಹಿಳಾ ಪಾಳಯಕ್ಕೆ ಬಂದಿದ್ದ ಕೊಹ್ಲಿ ಆಟಗಾರರಿಗೆ ಕಿವಿಮಾತು ಹೇಳಿ ಚೆನ್ನಾಗಿ ಆಡುವಂತೆ ಉತ್ಸಾಹ ತುಂಬಿದ್ದಾರೆ. ಕೊಹ್ಲಿ ಮಾತಿನಿಂದ ನಮ್ಮ ಉತ್ಸಾಹ ಇಮ್ಮಡಿಯಾಗಿತ್ತು ಎಂಬುದನ್ನು ಸ್ವತಃ ಹೀದರ್ ನೈಟ್ ಹೇಳಿಕೊಂಡಿದ್ದರು. ಪ್ರತಿಯೊಬ್ಬ ಆಟಗಾರರಲ್ಲೂ ಕೊಹ್ಲಿ ಹೊಸ ಹುರುಪು ತುಂಬಿದ್ದರು. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಆಟಗಾರರು ವಿಶೇಷ ಉತ್ಸಾಹದಿಂದ ಆಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ