Steve Smith: ಟೀಂ ಇಂಡಿಯಾ ವಿರುದ್ಧ ಸೆಮಿಫೈನಲ್ ಸೋತ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟೀವ್ ಸ್ಮಿತ್

Krishnaveni K

ಬುಧವಾರ, 5 ಮಾರ್ಚ್ 2025 (12:13 IST)
Photo Credit: X
ದುಬೈ: ಟೀಂ ಇಂಡಿಯಾ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಸೋತ ಬೆನ್ನಲ್ಲೇ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಕಂಡ ಅದ್ಭುತ ಆಟಗಾರ. ಅದರಲ್ಲೂ ಭಾರತದ ವಿರುದ್ಧ ಅವರು ಅತ್ಯುತ್ತಮ ಆಟವನ್ನೇ ಪ್ರದರ್ಶಿಸಿದ್ದರು. ನಿನ್ನೆಯೂ ಅವರು ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ ಅವರಿಗೆ ನಿನ್ನೆಯ ಪಂದ್ಯವನ್ನು ಗೆಲ್ಲಲಾಗಲಿಲ್ಲ ಎನ್ನುವ ಕೊರಗಿತ್ತು.

ಇದೀಗ ಅವರು ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. 2027 ನೇ ಏಕದಿನ ವಿಶ್ವಕಪ್ ಗೆ ಹೊಸಬರಿಗೆ ಅವಕಾಶ ಮಾಡಿಕೊಡಲು ಈಗನೇ ನಿವೃತ್ತಿ ಹೇಳುವುದು ಉಚಿತವೆನಿಸುತ್ತಿದೆ. ಇದಕ್ಕಾಗಿ ಏಕದಿನಕ್ಕೆ ವಿದಾಯ ಹೇಳುತ್ತಿದ್ದೇನೆ. ಸದ್ಯಕ್ಕೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಆಡುವುದನ್ನು ಎದಿರು ನೋಡುತ್ತಿದ್ದೇನೆ. ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನೂ ಹಲವು ದಿನ ಕೊಡುಗೆ ನೀಡಬಲ್ಲೆ ಎನಿಸುತ್ತಿದೆ’ ಎಂದು ಸ್ಮಿತ್ ಹೇಳಿದ್ದಾರೆ.

ನಿನ್ನೆಯ ಪಂದ್ಯ ಸೋತ ಬಳಿಕ ಸ್ಮಿತ್ ಭಾವುಕರಾಗಿ ಕಣ್ಣೀರು ಹಾಕಿದ್ದರು. ವಿರಾಟ್ ಕೊಹ್ಲಿ ಕೂಡಾ ಅಪ್ಪಿ ಸ್ಮಿತ್ ರನ್ನು ಸಂತೈಸಿದ್ದರು. ಒಟ್ಟು 170 ಏಕದಿನ ಪಂದ್ಯವಾಡಿರುವ ಸ್ಮಿತ್ 5800 ರನ್ ಗಳಿಸಿದ್ದಾರೆ. 2015 ಮತ್ತು 2023  ರ ಏಕದಿನ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ