IND vs AUS: ವಿರಾಟ್ ಕೊಹ್ಲಿ ಕ್ಯಾಚ್ ಡ್ರಾಪ್, ಅನುಷ್ಕಾ ಶರ್ಮಾ ಕೋಲ್ಗೇಟ್ ಸ್ಮೈಲ್

Krishnaveni K

ಮಂಗಳವಾರ, 4 ಮಾರ್ಚ್ 2025 (21:19 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ನಲ್ಲಿ ಇಂದು ಗೆಲುವಿಗಾಗಿ ಹೋರಾಡುತ್ತಿರುವ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಬಲವಾಗಿ ನಿಂತರು. ಈ ವೇಳೆ ಕೊಹ್ಲಿ ಕ್ಯಾಚ್ ನ್ನು ಆಸೀಸ್ ಕೈಚೆಲ್ಲಿದ್ದು ಅನುಷ್ಕಾ ಶರ್ಮಾ ಕೋಲ್ಗೇಟ್ ಸ್ಮೈಲ್ ಎಲ್ಲರ ಗಮನ ಸೆಳೆದಿದೆ.

ಪತಿ ಮತ್ತು ಟೀಂ ಇಂಡಿಯಾಕ್ಕೆ ಚಿಯರ್ ಅಪ್ ಮಾಡಲು ಇಂದೂ ಅನುಷ್ಕಾ ಶರ್ಮಾ ಮೈದಾನಕ್ಕೆ ಬಂದಿದ್ದರು. ವಿರಾಟ್ ಅರ್ಧಶತಕ ಸಿಡಿಸಿದಾಗ ಎದ್ದು ನಿಂತು ಖುಷಿಯಿಂದ ಸಂಭ್ರಮಿಸಿದ ಅನುಷ್ಕಾ ಔಟಾದಾಗ ಅಷ್ಟೇ ಬೇಸರಗೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 265 ರನ್ ಗಳ ಗೆಲುವಿನ ಗುರಿ ನೀಡಿತ್ತು. ಆದರೆ ಆರಂಭಿಕರಾದ ರೋಹಿತ್-ಗಿಲ್ ರನ್ನು ಬೇಗನೇ ಕಳೆದುಕೊಂಡ ಬಳಿಕ ಇನಿಂಗ್ಸ್ ನ ಸಂಪೂರ್ಣ ಹೊಣೆ ಕೊಹ್ಲಿ ಹೆಗಲಿಗೆ ಬಿತ್ತು.

ಒಮ್ಮೆಯಂತೂ ಕೊಹ್ಲಿ ನೀಡಿದ ಕ್ಯಾಚ್ ನ್ನು ಆರ್ ಸಿಬಿ ಗೆಳೆಯ ಗ್ಲೆನ್ ಮ್ಯಾಕ್ಸ್ ವೆಲ್ ಕೈ ಚೆಲ್ಲಿದರು. ಈ ವೇಳೆ ಗ್ಯಾಲರಿಯಲ್ಲಿ ಕೂತಿದ್ದ ಅನುಷ್ಕಾ ಶರ್ಮಾ ಮುಖದಲ್ಲಿ ನಗುವೋ ನಗು. ಅನುಷ್ಕಾರ ಈ ರಿಯಾಕ್ಷನ್ ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದೆ. ಹೆಂಡತಿ ಎಂದರೆ ಹೀಗಿರಬೇಕು ಎಂದು ಕೆಲವರು ಹೇಳಿದರೆ ಕೊಹ್ಲಿ ವಿಫಲರಾದಾಗಲೆಲ್ಲಾ ಅನುಷ್ಕಾರನ್ನು ದೂರುವ ಮಂದಿ ಇಂದು ಅವರ 84 ರನ್ ಗಳ ಮಹತ್ವದ ಇನಿಂಗ್ಸ್ ಗೂ ಅನುಷ್ಕಾಗೇ ಕ್ರೆಡಿಟ್ ಕೊಡಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ