ಟಿ20 ವಿಶ್ವಕಪ್: ಭಾರತ-ಬಾಂಗ್ಲಾ ನಡುವೆ ಇಂದು ಮಹತ್ವದ ಪಂದ್ಯ
ಕಳೆದ ಪಂದ್ಯವನ್ನು ದ.ಆಫ್ರಿಕಾ ವಿರುದ್ಧ ರೋಹಿತ್ ಪಡೆ ಸೋತಿತ್ತು. ಹೀಗಾಗಿ ಈಗ ಟೀಂ ಇಂಡಿಯಾಗೆ ಸೆಮಿಫೈನಲ್ ಗೇರಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ.
ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡರಲ್ಲಿಯೂ ಭಾರತ ಕಳಪೆ ಪ್ರದರ್ಶನ ನೀಡಿತ್ತು. ಬಿಗ್ ಹಿಟ್ಟರ್ ಗಳು ವೈಫಲ್ಯ ಅನುಭವಿಸುತ್ತಿರುವುದು ಟೀಂ ಇಂಡಿಯಾಕ್ಕೆ ಹಿನ್ನಡೆಯಾಗಿದೆ. ದಿನೇಶ್ ಕಾರ್ತಿಕ್ ಗಾಯಗೊಂಡಿದ್ದು ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಹೀಗಾದಲ್ಲಿ ರಿಷಬ್ ಪಂತ್ ಅವಕಾಶ ಪಡೆಯಬಹುದು. ಕೆಎಲ್ ರಾಹುಲ್ ಕಳಪೆ ಫಾರ್ಮ್ ನಲ್ಲಿರುವುದರಿಂದ ಅವರಿಗೆ ಹಿಂಬಡ್ತಿ ಸಿಗುವ ಸಾಧ್ಯತೆಯೂ ಇಲ್ಲದಿಲ್ಲ. ಬೌಲಿಂಗ್ ನಲ್ಲಿ ಅನುಭವಿ ರವಿಚಂದ್ರನ್ ಅಶ್ವಿನ್ ದುಬಾರಿಯಾಗಿದ್ದು, ದೀಪಕ್ ಹೂಡಾ ಸಿಕ್ಕ ಅವಕಾಶವನ್ನು ಬಳಸಿಕೊಂಡಿಲ್ಲ. ಹೀಗಾಗಿ ಅಕ್ಸರ್ ಪಟೇಲ್ ಕಮ್ ಬ್ಯಾಕ್ ಮಾಡಬಹುದು. ಉಳಿದಂತೆ ತಂಡದಲ್ಲಿ ದೊಡ್ಡ ಬದಲಾವಣೆ ಸಾಧ್ಯತೆಯಿಲ್ಲ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.