ಟಿ20 ವಿಶ್ವಕಪ್: ‘ವಿರಾಟ ಪರ್ವ’ಕ್ಕೆ ಮನಸೋತ ಭಾರತೀಯರು
ಆರಂಭದಲ್ಲೇ ಬಿಗ್ ಹಿಟ್ಟರ್ ರೋಹಿತ್ ಶರ್ಮಾ (0), ಕೆಎಲ್ ರಾಹುಲ್ (3) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಆಸರೆಯಾಗಿದ್ದು ನಾಯಕ ವಿರಾಟ್ ಕೊಹ್ಲಿ. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಕೊಹ್ಲಿ ಅರ್ಧಶತಕ ಗಳಿಸಿದ ಬಳಿಕ ಬಿರುಸಿನ ಆಟಕ್ಕೆ ಕೈ ಹಾಕಿದರು. ತಕ್ಕ ಸಮಯದಲ್ಲಿ ತಮ್ಮ ಖ್ಯಾತಿಗೆ ತಕ್ಕ ಆಟವಾಡಿದ ಕೊಹ್ಲಿ 49 ಎಸೆತಗಳಿಂದ 57 ರನ್ ಗಳಿಸಿ ಔಟಾದರು. ಇವರಿಗೆ ತಕ್ಕ ಸಾಥ್ ನೀಡಿದವರು ರಿಷಬ್ ಪಂತ್. 30 ಎಸೆತಗಳಿಂದ 39 ರನ್ ಗಳಿಸಿದ ರಿಷಬ್ ಶಹಬಾದ್ ಖಾನ್ ಬೌಲಿಂಗ್ ನಲ್ಲಿ ಕಾಟ್ ಆಂಡ್ ಬೌಲ್ಡ್ ಆದರು.
ಕೊಹ್ಲಿಗೆ ತಕ್ಕ ಸಾಥ್ ನೀಡಿದ ರವೀಂದ್ರ ಜಡೇಜಾ 13 ರನ್ ಗಳಿಸಿ ಮಿಂಚಿದರು. ಕೊನೆಯಲ್ಲಿ ಬಂದ ಹಾರ್ದಿಕ್ ಪಾಂಡ್ಯ 7 ಎಸೆತಗಳಿಂದ 11 ರನ್ ಗಳಿಸಿ ತಂಡದ ಮೊತ್ತ 150 ರ ಗಡಿ ತಲುಪಲು ನೆರವಾದರು. ಪಾಕ್ ಪರ ಶಾಹಿನ್ ಅಫ್ರಿದಿ 3 ವಿಕೆಟ್ ಕಬಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ 152 ರನ್ ಗಳ ಗೆಲುವಿನ ಗುರಿ ನೀಡಿದೆ.