ಗುಜರಾತ್ ಟೈಟನ್ಸ್ ವಿರುದ್ಧ ಆರ್ ಸಿಬಿ ಗೆಲ್ಲುತ್ತಾ: ಗಿಣಿ ಭವಿಷ್ಯ ಇಲ್ಲಿದೆ ನೋಡಿ

Sampriya

ಬುಧವಾರ, 2 ಏಪ್ರಿಲ್ 2025 (17:05 IST)
Photo Courtesy X
ಬೆಂಗಳೂರು : ಇಂದು ಸಂಜೆ ಆರ್‌ಸಿಬಿ ತನ್ನ ತವರು ನೆಲದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣೆಸಲಿದೆ.

ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025 ಟೂರ್ನಿಯ ಪಂದ್ಯದಲ್ಲಿ ಜಿಟಿ ವಿರುದ್ಧ ಆರ್‌ಸಿಬಿ ಮೊದಲ ಬಾರಿಗೆ ಮುಖಾಮುಖಿಯಾಗಲಿದೆ. ಐಪಿಎಲ್‌ 18ನೇ ಆವೃತ್ತಿಯಲ್ಲಿ ಇದುವರೆಗೂ ನಡೆದ ಎರಡು ಪಂದ್ಯಾಟದಲ್ಲೂ ಜಯ ಸಾಧಿಸಿರುವ ಆರ್‌ಸಿಬಿ,
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಆರ್‌ಸಿಬಿ ನಾಯಕ ರಜಿತ್ ಪಾಟಿದಾರ್ ಪಡೆ, ಇಂದು ಕೂಡಾ ಭಾರೀ ಲೆಕ್ಕಚಾರದೊಂದಿಗೆ ಗುಜರಾತ್‌ ಅನ್ನು ಮಣಿಸಲು ಸಜ್ಜಾಗಿದೆ. ಈಗಾಗಲೇ ಇಂದಿನ ಪಂದ್ಯಾಟದ ಬಗ್ಗೆ ಸಮೀಕ್ಷೆಗಳು ಭಾರೀ ನಡೆದಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂದಿನ ಆರ್‌ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯಾಟದ ಬಗ್ಗೆ ಗಿಳಿ ಶಾಸ್ತ್ರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಜ್ಯೋತಿಷ್ಯರೊಬ್ಬರು ಆರ್‌ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯಾಟದಲ್ಲಿ ಯಾವುದು ಗೆಲುವು ಸಾಧಿಸುತ್ತದೆ ಎಂದು ಸಾಕಿದ ಗಿಳಿ ರಾಮನಲ್ಲಿ ಕೇಳಿದ್ದಾರೆ.

ಗಿಳಿ ನೀಡಿದ ಕಾರ್ಡ್‌ನಲ್ಲಿ ಆರ್‌ಸಿಬಿ ಗೆಲ್ಲುತ್ತದೆ ಎಂದು ಭವಿಷ್ಯವಿದೆ. ಜ್ಯೋತಿಷಿ ಇಂದಿನ ಪಂದ್ಯಾಟದಲ್ಲಿ ಆರ್‌ಸಿಬಿ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಒಟ್ಟಾರೆ ಇಂದಿನ ಪಂದ್ಯಾಟ ತವರು ನೆಲದಲ್ಲಿ ನಡೆಯುತ್ತಿರುವುದರಿಂದ ಆರ್‌ಸಿಬಿಗೆ ತುಂಬಾನೇ ಮುಖ್ಯವಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಜಯದ ಹಿನ್ನೆಲೆಯಲ್ಲಿ ಗುಜರಾತ್ ಟೈಟನ್ಸ್, ಆರ್‌ಸಿಬಿ ಅಭಿಮಾನಿಗಳ ಹರ್ಷೋದ್ಗಾರವನ್ನು ಮಂಕಾಗಿಸಿ ಪ್ರಬಲ ಪೈಪೋಟಿ ನೀಡುವ ತವಕದಲ್ಲಿದೆ.
 
 
 
 
View this post on Instagram
 
 
 
 
 
 
 
 
 
 
 

A post shared by prediction star????⭐ (@predictionstar2025)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ