ಮಹಿಳಾ ಐಪಿಎಲ್: ಆರ್ ಸಿಬಿಗಿಂದು ಮೊದಲ ಪಂದ್ಯ

ಭಾನುವಾರ, 5 ಮಾರ್ಚ್ 2023 (09:20 IST)
Photo Courtesy: Twitter
ಮುಂಬೈ: ಮಹಿಳಾ ಐಪಿಎಲ್ ನಲ್ಲಿ ಇಂದು ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯವಾಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಆರ್ ಸಿಬಿ ಮೊದಲ ಪಂದ್ಯವಾಡುತ್ತಿದೆ. ಇದುವರೆಗೆ ಪುರುಷರ ಐಪಿಎಲ್ ನಲ್ಲಿ ಆರ್ ಸಿಬಿಗೆ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮಹಿಳೆಯರ ಆರ್ ಸಿಬಿ ತಂಡ ಇತರರಗಿಂತ ಸ್ಟ್ರಾಂಗ್ ಆಗಿದ್ದು, ಪುರುಷರ ತಂಡದಿಂದ ಸಾಧ‍್ಯವಾಗದೇ ಇದ್ದ ಕಪ್ ಗೆಲ್ಲುವ ಸಾಧನೆ ಮಹಿಳೆಯರು ಮಾಡಲಿದ್ದಾರೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ.

ಆರ್ ಸಿಬಿ ತಂಡದಲ್ಲಿ ಸ್ಮೃತಿ ಮಂಧನಾ ಜೊತೆಗೆ ಎಲ್ಸಿ ಪೆರಿ, ಎರಿನ್ ಬರ್ನ್ಸ್,ಹೀದರ್ ನೈಟ್, ಸೋಫೀ ಡಿವೈನ್, ರಿಚಾ ಘೋಷ್ ಮುಂತಾದ ಘಟಾನುಘಟಿ ಆಟಗಾರರಿದ್ದಾರೆ. ಅತ್ತ ಡೆಲ್ಲಿ ತಂಡಕ್ಕೆ ಮೆಗ್ ಲ್ಯಾನಿಂಗ್ ನಾಯಕತ್ವವಿದ್ದು, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮ, ಜೈಶಾ ಅಖ್ತರ್, ಲೌರಾ ಹ್ಯಾರಿಸ್ ಮುಂತಾದ ಸ್ಟಾರ್ ಆಟಗಾರರ ಬಲವಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದ್ದು ಕಲರ್ಸ್ ಕನ್ನಡ ಸಿನಿಮಾ ಮತ್ತು ಜಿಯೋ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ