ಕ್ರಿಕೆಟ್ ಶಿಶುಗಳ ಎದುರು ಟೀಂ ಇಂಡಿಯಾ ಬೃಹತ್ ಮೊತ್ತ

ಶುಕ್ರವಾರ, 15 ಜೂನ್ 2018 (13:16 IST)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತ ಪೇರಿಸಿದೆ.

ದ್ವಿತೀಯ ದಿನವಾದ ಇಂದು ಟೀಂ ಇಂಡಿಯಾ  ಮೊದಲ ಇನಿಂಗ್ಸ್ ನಲ್ಲಿ 474 ರನ್ ಗಳಿಸಿ ಆಲೌಟ್ ಆಗಿದೆ. ದ್ವಿತೀಯ ದಿನವಾದ ಇಂದು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹೈಲೈಟ್ ಆಗಿತ್ತು. ಉತ್ತಮ ಲಯದಲ್ಲಿದ್ದ ಪಾಂಡ್ಯ 71 ರನ್ ಗಳಿಸಿ ಔಟಾದರು. ಬಾಲಂಗೋಚಿಗಳು ಯಾರೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

ಇದರೊಂದಿಗೆ ಕ್ರಿಕೆಟ್ ಶಿಶುಗಳ ಎದುರು ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತವನ್ನೇ ಪೇರಿಸಿದೆ. ಮತ್ತೆ ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ ಕೇವಲ 50 ರನ್ ಗಳಿಗೆ 4 ವಿಕೆಟ್ ಗಳನ್ನು ಕಳೆದುಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ