ಬಾಂಗ್ಲಾ ವಿರುದ್ಧ ಸೋತ ಟೀಂ ಇಂಡಿಯಾ ಕ್ರಿಕೆಟಿಗ ಪಂದ್ಯದ ಶುಲ್ಕ ಕಟ್!

ಮಂಗಳವಾರ, 6 ಡಿಸೆಂಬರ್ 2022 (09:00 IST)
ಢಾಕಾ: ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಕೊನೆಯ ಹಂತದಲ್ಲಿ ಸೋತ ಟೀಂ ಇಂಡಿಯಾಗೆ ಮತ್ತೊಂದು ಶಾಕ್ ಸಿಕ್ಕಿದೆ.

ಬಾಂಗ್ಲಾ ವಿರುದ್ಧ ನಿಧಾನಗತಿಯ ಓವರ್ ಮಾಡಿದ್ದಕ್ಕಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿದಂತೆ ಇಡೀ ತಂಡಕ್ಕೆ ದಂಡದ ಬರೆ ಹಾಕಲಾಗಿದೆ.

ಟೀಂ ಇಂಡಿಯಾ ನಾಲ್ಕು ಓವರ್ ಗಳಷ್ಟು ನಿಧಾನಗತಿಯ ಓವರ್ ನಡೆಸಿದ್ದಕ್ಕೆ ಪಂದ್ಯದ ಶುಲ್ಕದ ಶೇ.80 ರಷ್ಟು ದಂಡ ವಿಧಿಸಲಾಗಿದೆ. ಮ್ಯಾಚ್ ರೆಫರಿ ರಂಜನ್ ಮದುಗಲೆ ಈ ತೀರ್ಪು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ