ಕೇಸರಿಯ ರಂಗು ಹೋಯ್ತು, ನೀಲಿ ಬಂತು, ಟೀಂ ಇಂಡಿಯಾ ಜೆರ್ಸಿ ಬಣ್ಣ ಬದಲಾಯ್ತು

Krishnaveni K

ಬುಧವಾರ, 29 ಮೇ 2024 (12:46 IST)
Photo Credit: X
ನ್ಯೂಯಾರ್ಕ್: ಟಿ20 ವಿಶ್ವಕಪ್ ಆಡಲು ಅಮೆರಿಕಾಗೆ ತೆರಳಿರುವ ಟೀಂ ಇಂಡಿಯಾ ಅಭ್ಯಾಸದ ವೇಳೆ ಹೊಸ ಜೆರ್ಸಿಯಲ್ಲಿ ಕಾಣಿಸಿಕೊಂಡಿದೆ.

ಇಷ್ಟು ದಿನ ಪ್ರಾಕ್ಟೀಸ್ ಮಾಡುವಾಗ ಟೀಂ ಇಂಡಿಯಾ ಆಟಗಾರರು, ಸಿಬ್ಬಂದಿಗಳು ಕೇಸರಿ ಬಣ್ಣದ ಜೆರ್ಸಿ ತೊಟ್ಟುಕೊಳ್ಳುತ್ತಿದ್ದರು. ಆದರೆ ಈಗ ಆಟಗಾರರ ಅಭ್ಯಾಸದ ಜೆರ್ಸಿ ಬಣ್ಣ ಮತ್ತೆ ನೀಲಿ ಬಣ್ಣಕ್ಕೆ ತಿರುಗಿದೆ.

ಕಳೆದ ಏಕದಿನ ವಿಶ್ವಕಪ್ ವೇಳೆ ಟೀಂ ಇಂಡಿಯಾ ಕೇಸರಿ ಬಣ್ಣದ ಜೆರ್ಸಿ ತೊಟ್ಟು ಅಭ್ಯಾಸಕ್ಕಿಳಿದಾಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಟೀಂ ಇಂಡಿಯಾ ಜೆರ್ಸಿಯನ್ನೂ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಕೇಸರೀಕರಣ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಆದರೆ ಈಗ ಟಿ20 ವಿಶ್ವಕಪ್ ವೇಳೆಗೆ ಮತ್ತೆ ಜೆರ್ಸಿ ಬಣ್ಣ ಬದಲಾಗಿದೆ. ಈ ಬಾರಿ ಆಟಗಾರರು ಕಡು ನೀಲಿ ಬಣ್ಣ ಜೆರ್ಸಿ ತೊಟ್ಟು ಅಭ್ಯಾಸಕ್ಕಿಳಿದಿದ್ದಾರೆ. ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ