ಇಂಗ್ಲೆಂಡ್ ವಿರುದ್ಧ ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯಲಿರುವ ಟೀಂ ಇಂಡಿಯಾ

ಗುರುವಾರ, 4 ಫೆಬ್ರವರಿ 2021 (09:16 IST)
ಚೆನ್ನೈ: ಇಂಗ್ಲೆಂಡ್  ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.


ಚೆನ್ನೈ ಮೈದಾನ ಕೊನೆಯ ಎರಡು ದಿನ ಸ್ಪಿನ್ನರ್ ಗಳಿಗೆ ಹೆಚ್ಚು ನೆರವು ನೀಡುತ್ತದೆ. ಹೀಗಾಗಿ ಮೊದಲ ಎರಡು ಪಂದ್ಯಗಳಿಗೆ ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್ ಅಲ್ಲದೆ, ಮತ್ತೊಬ್ಬ ಸ್ಪಿನ್ನರ್ ಕಣಕ್ಕಿಳಿಯುವ ಸಾಧ‍್ಯತೆಯಿದೆ. ಆ ಪೈಕಿ ಯುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಗೆ ಅವಕಾಶ ಸಿಗುವ ಸಾಧ‍್ಯತೆ ಹೆಚ್ಚು. ಸುಂದರ್ ಗೆ ಇದು ತವರಿನ ಪಿಚ್ ಎಂಬ ಬಲ ಒಂದು ಕಡೆಯಾದರೆ, ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಸಹಾಯಕ್ಕೆ ಬಂದಿದ್ದು ಪ್ಲಸ್‍ ಪಾಯಿಂಟ್ ಆಗಲಿದೆ. ಹೀಗಾಗಿ ಸುಂದರ್ ಮೊದಲ ಬಾರಿಗೆ ತವರಿನಲ್ಲಿ ಟೆಸ್ಟ್ ಆಡುವ ಅವಕಾಶ ಪಡೆಯುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ