ಐಪಿಎಲ್ ನಲ್ಲಿ ಗರಿಷ್ಠ ಸಂಭಾವನೆ ಪಡೆದ ಹೆಗ್ಗಳಿಕೆಗೆ ಪಾತ್ರರಾದ ಧೋನಿ

ಬುಧವಾರ, 3 ಫೆಬ್ರವರಿ 2021 (11:10 IST)
ಮುಂಬೈ: ಒಟ್ಟು 14 ಐಪಿಎಲ್ ಕೂಟಗಳಿಂದ ವೇತನದ ಮೂಲಕ ಗರಿಷ್ಠ ಸಂಭಾವನೆ ಪಡೆದ ಆಟಗಾರ ಎಂಬ ಹೆಗ್ಗಳಿಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಪಾಲಾಗಲಿದೆ.


14 ನೇ ಐಪಿಎಲ್ ಆವೃತ್ತಿಯ ಸಂಭಾವನೆಯೂ ಸೇರಿ ಅವರ ವೇತನದ ಒಟ್ಟು ಮೊತ್ತ 152 ಕೋಟಿ ರೂ. ತಲುಪಲಿದೆ. ಈ ಮೂಲಕ ಐಪಿಎಲ್ ನಲ್ಲಿ 150 ಕೋಟಿಗಿಂತಲೂ ಹೆಚ್ಚು ವೇತನ ಸಂಪಾದಿಸಿದ ಮೊದಲ ಆಟಗಾರ ಎಂಬ ದಾಖಲೆ ಮಾಡಲಿದ್ದಾರೆ. ಐಪಿಎಲ್ ನಲ್ಲಿ 100 ಕೋಟಿ ಸಂಭಾವನೆ ಪಡೆದ ಮೊದಲ ವಿದೇಶೀ ಆಟಗಾರ ಎಬಿಡಿ ವಿಲಿಯರ್ಸ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ