ಡಬ್ಲ್ಯುಪಿಎಲ್: ಫೈನಲ್ ತಲುಪಿದ ಮೊದಲ ತಂಡ ಡೆಲ್ಲಿ ಕ್ಯಾಪಿಟಲ್ಸ್

ಬುಧವಾರ, 22 ಮಾರ್ಚ್ 2023 (09:30 IST)
ಮುಂಬೈ: ಚೊಚ್ಚಲ ಡಬ್ಲ್ಯುಪಿಎಲ್ ಕೂಟದ ಫೈನಲ್ ತಲುಪಿದ ಗೌರವಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾತ್ರವಾಗಿದೆ.

ನಿನ್ನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ರನ್ನು ಮಣಿಸಿದ ಡೆಲ್ಲಿ ಮೊದಲನೆಯ ತಂಡವಾಗಿ ಫೈನಲ್ ಗೆ ಲಗ್ಗೆಯಿಟ್ಟಿದೆ. ಶುಕ್ರವಾರ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ನಡುವೆ ಪ್ಲೇ ಆಫ್ ಪಂದ್ಯ ನಡೆಯಲಿದ್ದು,  ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ನಲ್ಲಿ ಡೆಲ್ಲಿ ವಿರುದ್ಧ ಸೆಣಸಾಡಲಿದೆ.

ಮುಂಬೈ ಈ ಕೂಟದ ಬಲಿಷ್ಠ ತಂಡವಾಗಿದ್ದು, ಡೆಲ್ಲಿ-ಮುಂಬೈ ನಡುವೆ ಫೈನಲ್ ಸಾಧ‍್ಯತೆ ಹೆಚ್ಚಾಗಿದೆ. ಭಾನುವಾರ ಫೈನಲ್ ಪಂದ್ಯ ನಡೆಯುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ