ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಆಪತ್ಬಾಂಧವರಾದ ಕ್ರಿಕೆಟಿಗರು ಈಗ ಬೇಡವಾದರು!

ಗುರುವಾರ, 4 ಫೆಬ್ರವರಿ 2021 (10:21 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ನಾಳೆಯಿಂದ ಭಾರತ ಟೆಸ್ಟ್ ಸರಣಿ ಆರಂಭವಾಗಲಿದ್ದು, ನಾಯಕ ವಿರಾಟ್ ಕೊಹ್ಲಿ ಅಂತಿಮ 11 ರ ಬಳಗವನ್ನು ಆರಿಸುವುದೇ ದೊಡ್ಡ ತಲೆನೋವಾಗಿದೆ.


ಆಸ್ಟ್ರೇಲಿಯಾ ಸರಣಿಯಲ್ಲಿ ಪ್ರಮುಖ ಆಟಗಾರರೆಲ್ಲಾ ಗಾಯದಿಂದಾಗಿ ತಂಡಕ್ಕೆ ಕೈ ಕೊಟ್ಟಾಗ ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದವರೇ ಟಿ ನಟರಾಜನ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಶಬ್ನಂ ಗಿಲ್ ಎಂಬಿತ್ಯಾದಿ ಪ್ರತಿಭಾವಂತ ಯುವ ಕ್ರಿಕೆಟಿಗರು. ಆದರೆ ಈಗ ತಂಡಕ್ಕೆ ಅನುಭವಿಗಳು ಪುನರಾಗಮನವಾಗಿರುವುದರಿಂದ ಯುವ ಕ್ರಿಕೆಟಿಗರು ಅನಿವಾರ್ಯವಾಗಿ ತಂಡದಿಂದ ಹೊರಗುಳಿಯಬೇಕಾಗಿದೆ. ಇಶಾಂತ್ ಶರ್ಮಾ ವಾಪಸಾತಿಯಾಗಿರುವುದರಿಂದ ಟಿ ನಟರಾಜನ್ ಅಥವಾ ಮೊಹಮ್ಮದ್ ಸಿರಾಜ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯುವುದಿದ್ದರೆ ವಾಷಿಂಗ್ಟನ್ ಸುಂದರ್ ಅವಕಾಶ ಪಡೆಯಲಿದ್ದಾರೆ. ಶಬ್ನಂ ಗಿಲ್ ಫಾರ್ಮ್ ಗೆ ಮಣೆ ನೀಡಿ ಅವರನ್ನೇ ಮಯಾಂಕ್ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿಸಬಹುದು. ಆದರೆ ಚೆನ್ನೈ ಸ್ಪಿನ್ನರ್ ಗಳಿಗೆ ನೆರವಾಗುವ ಪಿಚ್ ಆಗಿರುವುದರಿಂದ ಹಾರ್ದಿಕ್ ಪಾಂಡ್ಯ ಅವಕಾಶ ಪಡೆಯುವ ಸಾಧ‍್ಯತೆ ಕಡಿಮೆ. ಇಬ್ಬರು ವೇಗಿಗಳು ಮಾತ್ರ ಆಡಿಸುವುದಾದರೆ ಬುಮ್ರಾ ಮತ್ತು ಇಶಾಂತ್ ಆಡುವುದು ಖಚಿತವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ